ಮಂಗಳೂರು: ಟ್ರಾಫಿಕ್ ನಿರ್ವಹಣೆಗೆ 50 ಬ್ಯಾರಿಕೇಡ್‌ಗಳ ಕೊಡುಗೆ
ಮಂಗಳೂರು, ಮಾ.8: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಶಾಸಕರ ನಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಂಗಳೂರು ಪೊಲೀಸ್ ಕಮಿಶನರೇಟ್ ವ್ಯಾಪ್ತಿಗೆ 50 ರಸ್ತೆ ತಡೆಗೇಟು(ಬ್ಯಾರಿಕೇಡ್)ಗಳನ್ನು ಸಾರ್ವಜನಿಕ ಸೇವೆಗೆ ನೀಡಲಾಯಿತು. ನಗರದ ಪೊಲೀಸ್ ಕಮಿಶನರ್ ಕಚೇರಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಐವನ್ ಡಿಸೋಜ ಹಾಗೂ ಕಮಿಷನರ್ ಎಂ.ಚಂದ್ರಶೇಖರ್ ಜಂಟಿಯಾಗಿ ಬ್ಯಾರಿಕೇಡ್‌ಗಳನ್ನು ಸಾರ್ವಜನಿಕ ಸೇವೆಗೆ ಹಸ್ತಾಂತರಿಸಿದರು.
ಪೊಲೀಸ್ ಕಮಿಶನರ್ ಎಂ.ಚಂದ್ರಶೇಖರ್ ಮಾತನಾಡಿ, ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ವಾರ್ಡನ್‌ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಸ್ವಯಂ ಸೇವಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲಾಗುವುದು. ಶಾಸಕರ ಮೂಲಕ ದೊರೆತ ಬ್ಯಾರಿಕೇಡ್ ಸಲಕರಣೆಗಳು ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಅನುಕೂಲವಾಗಲಿದೆ. ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಾಗರಿಕರು ಪೊಲೀಸ್ ಇಲಾಖೆಗೆ ಸಲಹೆ ಸೂಚನೆ ನೀಡಬಹುದು. ಅವುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಮಂಗಳೂರು ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್,ಮಾಜಿ ಮೇಯರ್ ಕೆ.ಅಶ್ರ್, ಡಿಸಿಪಿ ಡಾ. ಸಂಜೀವ ಎಂ.ಪಾಟೀಲ್, ಟ್ರಾಫಿಕ್ ವಿಭಾಗದ ಎಸಿಪಿ ಉದಯ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.





