ವಿಶ್ವಕಪ್‌ಗೆ ಇನ್ನೂ ಭಾರತಕ್ಕೆ ಬಾರದ ಪಾಕ್ ತಂಡ .!

ಕರಾಚಿ, ಮಾ.9:ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ಆರಂಭಗೊಂಡಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಇನ್ನೂ ಆಗಮಿಸಿಲ್ಲ. ಭಾರತದಲ್ಲಿ ಭದ್ರತೆಯ ವಿಚಾರದಲ್ಲಿ ಸರಕಾರದ ಅನುಮತಿಗಾಗಿ ಕಾಯುತ್ತಿದೆ.
ಪಾಕಿಸ್ತಾನದ ನಿಯೋಗವೊಂದು ಕೆಲವು ದಿನಗಳ ಹಿಂದೆ ಬಾರತಕ್ಕೆ ಆಗಮಿಸಿ ಭದ್ರತೆಯ ಬಗ್ಗೆ ಪರಿಶೀಲಿಸಿತ್ತು. ಅದರಲ್ಲೂ ಮುಖ್ಯವಾಗಿ ಮಾ.19 ರಂದು ಧರ್ಮಶಾಲಾದಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೆ ನೀಡಲಾಗುವ ಭದ್ರತೆಯನ್ನು ಪರಿಶೀಲಿತ್ತು. ಈ ಪಂದ್ಯಕ್ಕೆ ಸ್ಥಳೀಯವಾಗಿ ವಿರೋಧ ಕಂಡು ಬಂದಿರುವ ವಿಚಾರದಲ್ಲಿ ಸಮಸ್ಯೆ ಉಂಟಾಗಿತ್ತು. ಪಂದ್ಯವನ್ನು ಬೇರೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವಂತೆ ಪಾಕ್ ಮಾಡಿರುವ ಮನವಿಗೆ ಭಾರತ ಸ್ಪಂದಿಸಿಲ್ಲ.
ವಿಶ್ವಕಪ್‌ಗೆ ಪಾಕಿಸ್ತಾನದ ಪುರುಷ ಮತ್ತು ಮಹಿಳಾ ತಂಡವನ್ನು ಕಳುಹಿಸುವ ವಿಚಾರದಲ್ಲಿ ಪಿಸಿಬಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇನ್ನೆರಡು ದಿನಗಳಲ್ಲಿ ಪಾಕ್‌ನ ತಂಡಗಳು ಭಾರತಕ್ಕೆ ತೆರಳುವ ನಿರೀಕ್ಷೆ ಇದೆ.
ಪಾಕಿಸ್ತಾನದ ಪುರುಷರ ತಂಡ ಮಾ.14ರಂದು ಕೋಲ್ಕತಾದಲ್ಲಿ ಅರ್ಹತಾ ಸುತ್ತಿನಲ್ಲಿ ವಿಜಯಿಯಾದ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಧರ್ಮಶಾಲಾದಲ್ಲಿ ಪಾಕ್ ತಂಡಕ್ಕೆ ಗರಿಷ್ಠ ಭದ್ರತೆ ಒದಗಿಸುವ ಬಗ್ಗೆ ಅಲ್ಲಿನ ಕ್ರಿಕೆಟ್ ಸಂಸ್ಥೆ ಭರವಸೆ ನೀಡಿದೆ.





