ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿದ ಯುವಕ

ಹೊಸದಿಲ್ಲಿ, ಮಾ.9: ಯುವಕನೊಬ್ಬ ಹದಿನಾರರ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಆಕೆಗೆ ಬೆಂಕಿ ಹಚ್ಚಿರುವ ಘಟನೆ ಗ್ರೇಟರ್ ನೊಯ್ಡಾದ ಟಿಗ್ರಿ ಎಂಬಲ್ಲಿ ನಡೆದಿದೆ.
ಸೋಮವಾರ ಯುವತಿಯ ಮನೆಗೆ ಪ್ರವೇಶಿಸಿದ ಪಕ್ಕದ ಮನೆಯ ಹದಿನೆಂಟರ ಹರೆಯದ ಯುವಕ ಅಜಯ್ ಕುಮಾರ್ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಸುಟ್ಟ ಗಾಯಗಳೊಂದಿಗೆ ಹೊಸದಿಲ್ಲಿಯ ಸಫ್ಧರ್‌ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





