Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಾಯಾವತಿ ನಮ್ಮ ವೈರಿ ನಂಬರ್ ಒನ್:...

ಮಾಯಾವತಿ ನಮ್ಮ ವೈರಿ ನಂಬರ್ ಒನ್: ಕಾನ್ಶೀರಾಂ ಸೋದರಿ

ಕಾನ್ಶೀರಾಂ ಜನ್ಮ ದಿನಾಚರಣೆ : ಕೇಜ್ರಿವಾಲ್ ಗೆ ಸ್ವಾಗತ

ವಾರ್ತಾಭಾರತಿವಾರ್ತಾಭಾರತಿ9 March 2016 12:15 PM IST
share
ಮಾಯಾವತಿ ನಮ್ಮ ವೈರಿ ನಂಬರ್ ಒನ್: ಕಾನ್ಶೀರಾಂ ಸೋದರಿ

ಲಕ್ನೌ : ಬಿಎಸ್ಪಿ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಗುರು ಕಾನ್ಶಿರಾಂ ಅವರ ಸ್ಮಾರಕಕ್ಕೆ ಅವರ ತಾತನ ಹಳ್ಳಿಯಾದರೋಪರ್‌ನಲ್ಲಿ ಶಿಲಾನ್ಯಾಸ ನೆರವೇರಿಸಿದ 19 ವರ್ಷಗಳ ನಂತರಈ ಸ್ಮಾರಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾನ್ಶೀರಾಂ ಸಹೋದರಿ ಸ್ವರಣ್ ಕೌರ್ ಮಾಯಾವತಿಯವರನ್ನು ಸ್ಮಾರಕ ಸಂದರ್ಶಿಸದಂತೆ ತಡೆದಿದ್ದರೆ, ಇನ್ನೊಂದು ಬೆಳವಣಿಗೆಯಲ್ಲಿ ಈ ಕಟ್ಟಡದಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಭವ್ಯ ಸ್ವಾಗತ ನೀಡಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಕೇಜ್ರಿವಾಲ್ ಮಾರ್ಚ್ 15ರಂದು ನಡೆಯಲಿರುವ ಕಾನ್ಶೀರಾಂ ಅವರ 82ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಮಾಯಾವತಿಅಲ್ಲಿಂದ ಸುಮಾರು 50 ಕಿಮಿ ದೂರದಲ್ಲಿರುವನವಾನ್ ಶಹರ್ ಗ್ರಾಮದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪಂಜಾಬ್‌ನಲ್ಲಿ ಚುನಾವಣೆಗಳು 2017ರಲ್ಲಿ ನಡೆಯಲಿದ್ದು ರಾಜ್ಯದ ಜನಸಂಖ್ಯೆಯ ಶೇ. 32ರಷ್ಟಿರುವ ದಲಿತರ ಮತಗಳು ಯಾವುದೇ ಪಕ್ಷಕ್ಕೆ ನಿರ್ಣಾಯಕವಾಗುವ ಸಂಭವವಿರುವುದರಿಂದ ದಲಿತರ ನಾಯಕನೆಂದೇ ಪ್ರತಿಬಿಂಬಿತವಾಗಿರುವ ಕಾನ್ಶೀರಾಂ ಅವರ ಜನ್ಮದಿನಾಚರಣೆ ಮಹತ್ವ ಪಡೆದುಕೊಂಡಿದೆ.

‘‘ಮಾಯಾವತಿ ನನ್ನ ವೈರಿ ನಂ.1. ಆಕೆ ನನ್ನ ಸಹೋದರನನ್ನು ಕೂಡಿ ಹಾಕಿ ಆತನ ಕುಟುಂಬ ಸದಸ್ಯರನ್ನು ಆತನನ್ನು ಭೇಟಿ ಮಾಡಲು ಬಿಡದೆ ಇಳಿ ವಯಸ್ಸಿನಲ್ಲಿ ಆತನನ್ನು ಕೊಂದು ಬಿಟ್ಟರು. ನನ್ನ ತಾಯಿ ಕೂಡ ಮಗನ ಸಾವಿಗೆ ಕೊರಗುತ್ತಾಇಹಲೋಕ ತ್ಯಜಿಸಿದರು. ಆಕೆ ಸೇತುವೆಯನ್ನು ದಾಟಿಈ ಹಳ್ಳಿಗೆ ಕಾಲಿಡಬಾರದು. ಈ ವಿಷಯವನ್ನು ಮುಚ್ಚಿ ಹಾಕಬೇಕೆಂದುನಮಗೆ ಮೂರು ತಿಂಗಳ ಹಿಂದೆಯೇ ಆಕೆಯಿಂದ ಸಂಜ್ಞೆ ಬಂದಿದೆ. ಆದರೆ ನಾವು ಕೇಜ್ರಿವಾಲ್ ಅವರನ್ನು ಸ್ವಾಗತಿಸುತ್ತೇವೆ,’’ಎಂದಿದ್ದಾರೆ 70 ವರ್ಷದ ಕೌರ್.

‘‘ವಾರಣಾಸಿಯಲ್ಲಿ ನಡೆದ ರವಿದಾಸ್ ಜಯಂತಿ ಸಮಾರಂಭದಲ್ಲಿನನ್ನ ಬಗ್ಗೆ ತಿಳಿದು ಕೊಂಡ ಕೇಜ್ರಿವಾಲ್ ಅಲ್ಲಿ ನನ್ನನ್ನು ಭೇಟಿಯಾಗಿ ನಂತರ ಅವರನ್ನು ಭೇಟಿ ಮಾಡಲು ನನಗೆ ಆಹ್ವಾನವಿತ್ತರು. ನಾವು ವೀರ್‌ಜಿಯವರ ಜನ್ಮದಿನಾಚರಣೆಯ ಗ್ಗೆ ಹೇಳಿದಾಗ ಸಮಾರಂಭಕ್ಕೆ ಬರುವುದಾಗಿ ಅವರು ತಿಳಿಸಿದರು,’’ಎಂದು ಆಕೆ ಹೇಳಿದರು.

ಬಾಬು ಕಾನ್ಶಿರಾಂ ಚಾರಿಟೇಬಲ್ ಫೌಂಡೇಶನ್ ಇದರ ಅಧ್ಯಕ್ಷರಾಗಿರುವ ಕೌರ್ ತಮಗೆ ಎಎಪಿ ಸೇರುವ ಇರಾದೆಯಿಲ್ಲವೆಂದಿದ್ದಾರೆ.‘‘ನಾನು ಯಾವುದೇ ರಾಜಕೀಯ ಪಕ್ಷ ಸೇರಿದರೆ ಅದು ದಲಿತರ ಉದ್ಧಾರಕ್ಕಾಗಿ ಆಂದೋಲನ ನಡೆಸಿದ ನನ್ನ ಸಹೋದರನಿಗೆ ಅವಮಾನ ಮಾಡಿದಂತೆ. ಅದೇ ಸಮಯ ಬಿಎಸ್ಪಿಯನ್ನು ತನ್ನ ತೆಕ್ಕೆಗೆ ಮಾಯಾವತಿ ಸೇರಿಸಿಕೊಂಡಿರುವುದರಿಂದ ನಾನು ಆ ಪಕ್ಷವನ್ನೂ ಬೆಂಬಲಿಸುವುದಿಲ್ಲ’’ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X