ಕಿನ್ನಿಗೋಳಿ: ಚಾಲಕನನ ನಿರ್ಲಕ್ಷ್ಯ; ಮನೆಗೆ ನುಗ್ಗಿದ ಲಾರಿ

ಕಿನ್ನಿಗೋಳಿ, ಮಾ.9: ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಟಿಪ್ಪರ್ ಲಾರಿಯೊಂದು ಮನೆಯ ಕಾಂಪೌಂಡ್ ಗೆ ಢಿಕ್ಕಿ ಹೊಡೆದ ಘಟನೆ ಕಿನ್ನಿಗೋಳಿ ಸಮೀಪದ ಕೊಯ್ಕುಡೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಿನ್ನಿಗೋಳಿ ಕಡೆಯಿಂದ ಕೊಯ್ಕುಡೆ ಕಿರಿದಾದ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಅತಿವೇಗದಿಂದ ಬಂದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೊಯ್ಕುಡೆ ಬೆನ್ನ ಎಂಬವರ ಮನೆಯ ಕಾಂಪೌಂಡ್ ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಸಂಚಾಯ ಸಂಪೂರ್ಣ ಅಸ್ತವ್ಯಸ್ತ ಗೊಂಡಿತ್ತು.
ಮಂಗಳೂರು ಉತ್ತರ ವಲಯ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ವಾಹನ ದಟ್ಟನೆಯನ್ನು ತಹಬದಿಗೆ ತಂದರು.
ಈ ಸಂಬಂಧ ಸುರತ್ಕಲ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





