ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 120 ರೂ.ಗೆ ನಿಗದಿ ಪಡಿಸಲು ಸಹಿ ಅಭಿಯಾನ; ನೀವೂ ಬೆಂಬಲಿಸುತ್ತೀರಾ?
ಚಿತ್ರ ನಿರ್ದೇಶಕನೊಬ್ಬ ಪ್ರಾರಂಭಿಸಿದ ಅಭಿಯಾನಕ್ಕೆ ಸೇರಿದ ಸಾವಿರಾರು ಮಂದಿ

ಬೆಂಗಳೂರು : ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಮಾನ ಟಿಕೆಟ್ ದರವನ್ನು ನಿಗದಿ ಪಡಿಸಿ ಅವುಗಳು ಚಿತ್ರ ರಸಿಕರಿಗೆ ರೂ120ಕ್ಕಿಂತ ಹೆಚ್ಚಿನ ದರ ವಿಧಿಸದಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ಚಿತ್ರ ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ಚೇಂಜ್.ಆರ್ಗ್‌ನಲ್ಲಿ ಆನ್‌ಲೈನ್ ಸಹಿ ಅಭಿಯಾನವೊಂದನ್ನುಆರಂಭಿಸಿದ್ದು ಅದಕ್ಕೆ ಈಗಾಗಲೇ ಹಲವು ನಟರೂ ಸೇರಿದಂತೆ ಸುಮಾರು 20,315 ಮಂದಿ ಸಹಿ ಹಾಕಿದ್ದಾರೆ. ಈ ಅಭಿಯಾನ ಆರಂಭಿಸಿದವರಿಗೆ 35,000 ಸಹಿಗಳನ್ನು ಸಂಗ್ರಹಿಸುವ ಗುರಿಯಿದೆ.
ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಿಸಲು ಚಿತ್ರ ಪ್ರೇಮಿಗಳು ವಾರಾಂತ್ಯದಲ್ಲಿ ರೂ 450ರ ತನಕವೂ ಪಾವತಿಸಬೇಕಾಗಿದೆಯೆಂದು ಹೇಳಿರುವ ದೂರುದಾರರು, ಇಲ್ಲಿ ಕನಿಷ್ಠ ಟಿಕೆಟ್ ದರ ರೂ. 120 ಆಗಿದ್ದರೂ ಅದು ಕೇವಲ ವಾರದ ದಿನಗಳಿಗೆ ಮಾತ್ರ ಅನ್ವಯಿಸುತ್ತದೆ.
ಮೇಲಾಗಿ ಇಲ್ಲಿನ ಮಲ್ಟಿಪ್ಲೆಕ್ಸುಗಳು ಸಮಾನ ಟಿಕೆಟ್ ದರ ವಿಧಿಸುತ್ತಿಲ್ಲವಾಗಿದ್ದುಚಿತ್ರವೊಂದಕ್ಕೆ ಇರುವ ಬೇಡಿಕೆಯಾಧಾರದಲ್ಲಿ ದರಗಳನ್ನು ನಿಗದಿ ಪಡಿಸಲಾಗುವುದರಿಂದ ಅಂತಿಮವಾಗಿ ಅದರ ಹೊರೆ ಚಿತ್ರ ವೀಕ್ಷಕನ ಮೇಲೆ ಬೀಳುತ್ತದೆಯೆಂದೂ ದೂರಲಾಗಿದೆ.
ನೆರೆಯ ತಮಿಳುನಾಡಿನಲ್ಲಿ ಮಾಡಿದಂತೆ ಗರಿಷ್ಠ ಟಿಕೆಟ್ ದರವನ್ನು ರೂ 120ಕ್ಕೆ ಕರ್ನಾಟಕದಲ್ಲೂ ನಿಗದಿ ಪಡಿಸಲು ಯಾಕೆ ಸಾಧ್ಯವಿಲ್ಲವೆಂಬ ಪ್ರಶ್ನೆಯನ್ನೂ ಅದು ಎತ್ತಿದೆ. ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಣೆಗೆಂದು ಹೋಗುವವರುರೂ 120ಕ್ಕಿಂತ ಹೆಚ್ಚಿನ ಟಿಕೆಟ್ ದರ ವಿಧಿಸದಂತೆ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗಿದೆ.
ನೀವೂ ಈ ಅಭಿಯಾನಕ್ಕೆ ಸಹಿ ಹಾಕಲಿಚ್ಛಿಸುತ್ತೀರಾ? ಹಾಗಾದರೆ ಈ ಲಿಂಕ್‌ಗೆ ಕ್ಲಿಕ್ ಮಾಡಿ http://chn.ge/1TKlFud







