ಸೆಹ್ವಾಗೆ ಉತ್ತರ ನೀಡಿ ಮತ್ತೆ ಮನಸ್ಸು ಬದಲಾಯಿಸಿದ ಶುಐಬ್ ಅಕ್ತರ್

ಹೊಸದಿಲ್ಲಿ,ಮಾ. 9: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಕ್ತರ್ ವೀರೇಂದ್ರ ಸೆಹ್ವಾಗ್‌ರ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ.
ತನ್ನ ಕುರಿತು ನೀಡಿದ ಹೇಳಿಕೆಯನ್ನು ಉಲ್ಲೇಖಿಸುತ್ತಾ ಸೆಹ್ವಾಗ್‌ರಂತಹ ಮಹಾನ್ ಕ್ರಿಕೆಟರ್‌ರ ಅಪರಿಪಕ್ವ ಹೇಳಿಕೆ ಅದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದರು.
ಆದರೆ ಆನಂತರ ಮನಸು ಬದಲಾಯಿಸಿದ್ದು ತನ್ನ ಹೇಳಿಕೆಯನ್ನು ಶುಐಬ್ ಅಕ್ತರ್ ಡಿಲಿಟ್ ಮಾಡಿದ್ದಾರೆ. ಸೆಹ್ವಾಗ್ ಇತ್ತೀಚೆಗೆ ಶುಐಬ್ ಅಕ್ತರ್ ಹಣಕ್ಕಾಗಿ ಭಾರತೀಯ ಕ್ರಿಕೆಟಿಗರನ್ನು ಹೊಗಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಪ್ರತಿ ಉತ್ತರವನ್ನು ಟ್ವೀಟ್ ಮೂಲಕ ಶುಐಬ್ ನೀಡಿದರು.
ಸೆಹ್ವಾಗ್ ಕೆಲವು ದಿನಗಳ ಮೊದಲು ಶುಐಬ್ ಉತ್ತಮ ಗೆಳೆಯ ಆದರೆ ಅವರು ಹಣಪಡೆದು ಭಾರತದ ಕ್ರಿಕೆಟಿಗರನ್ನು ಹೊಗಳುತ್ತಿದ್ದಾರೆ. ಅವರು ಭಾರತದಲ್ಲಿ ಉದ್ಯಮ ಸ್ಥಾಪಿಸಲು ಬಯಸುತ್ತಿದ್ದಾರೆ. ಆದ್ದರಿಂದ ಅವರು ಭಾರತವನ್ನು ಹೊಗಳುತ್ತಿದ್ದಾರೆ. ಹಾಗೂ ಅವರಿಗೆ ವೀಕ್ಷಕ ವಿವರಣೆಗಾಗಿ ಹೆಚ್ಚು ಹಣ ಸಿಗುವಂತಾಗಲಿ ಎಂಬುದು ಅವರ ಉದ್ದೇಶವಾಗಿದೆ ಎಂದಿದ್ದರು.
Next Story





