ಜೆಎನ್‌ಯುನಲ್ಲಿ ಪಾಸಿಟಿವ್ ಎನರ್ಜಿಗಾಗಿ ಯೋಗ ಕಲಿಸಲು ಹೊರಟ ಬಾಬ ರಾಮ್‌ದೇವ್!

ಹೊಸದಿಲ್ಲಿ, ಮಾ.9: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರ ಆಝಾದಿ ಕೂಗಿಗೆ ಕಾರಣವೇನೆಂದು ಹುಡುಕಲು ಹೊರಟಿರುವ ವಿವಾದಾಸ್ಪದ ಬಾಬ ರಾಮ್ ದೇವ್ ಅಲ್ಲಿ ಪಾಸಿಟಿವ್ ಎನರ್ಜಿಯಿಲ್ಲ ಎಂದು ಕಂಡುಕೊಂಡಿದ್ದಾರೆ. ಆದ್ದರಿಂದ ಅವರು ಆರೋಗ್ಯವಿರುವ ಯುವಕರನ್ನು ಸೃಷ್ಟಿಸಲು ಜೆನ್‌ಯು ಕ್ಯಾಂಪಸ್‌ಗೆ ಹೋಗಲಿದ್ದಾರೆ.
ಬಾಬ ರಾಮ್‌ದೇವ್ ನಿರ್ದೇಶದಂತೆ ಅನುಯಾಯಿಗಳು ಪಾಸಿಟಿವ್ ಎನರ್ಜಿ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸತೊಡಗಿದ್ದಾರೆ. ಅಲ್ಲಿ ರಾಮ್‌ದೇವ್‌ರ ಯೋಗ ಕ್ಯಾಂಪ್ ಆರಂಭವಾಗಲಿದೆ.
ಈ ಯೋಜನೆಯನ್ನು ವಿದ್ಯಾರ್ಥಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಈಗ ಎಲ್ಲೆಡೆ ಕೆರಳಿದೆ. ಯೋಗ ಕಲಿಸಲು ವಿಶ್ವವಿದ್ಯಾನಿಲಯದ ಆಡಳಿತ ಅನುಮತಿ ನೀಡಬಹುದೆಂಬ ವಿಶ್ವಾಸ ರಾಮ್‌ದೇವ್‌ರಿಗೆ ಇದೆ.
ಅಫ್ಝಲ್ ಗುರು ವಿವಾದದ ಹಿನ್ನೆಲೆಯಲ್ಲಿ ಯೋಗ ಕಲಿಸುವ ಆಶಯಕ್ಕೆ ಸ್ವಾಗತ ನೀಡಲು ಎಬಿವಿಪಿ ಮುಂದೆ ಬಂದಿದೆ. ಈ ಮೊದಲು ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಮ್‌ದೇವ್‌ರನ್ನು ಕರೆಯಲಾಗಿತ್ತು. ವಿದ್ಯಾರ್ಥಿಗಳ ವಿರೋಧದ ಕಾರಣದಿಂದ ರಾಮ್‌ದೇವ್ ಕ್ಯಾಂಪಸ್‌ಗೆ ಬಂದಿರಲಿಲ್ಲ.ಈ ಪರಿಸ್ಥಿತಿಯಲ್ಲಿ ಬಾರಾಮ್‌ದೇವ್‌ರ ಯೋಗ ತರಗತಿ ಕೂಡಾ ವಿವಾದಾಸ್ಪದವಾಗಲಿದೆ ಎಂಬುದು ಖಾತರಿಯಾಗಿದೆ. ಆದರೆ ಎಡಪಕ್ಷಗಳು ಈ ಕಾರ್ಯಕ್ರಮದ ಕುರಿತು ದೃಢವಾಗಿ ಪ್ರತಿಕ್ರಿಯಿಸಲಿದೆ.
ಯೋಗದ ನೆಪದಲ್ಲಿ ಕ್ಯಾಂಪಸ್‌ನಲ್ಲಿ ಹಿಂದುತ್ವ ಪ್ರಚಾರಕ್ಕೆ ಯಾರನ್ನೂ ಬಿಡಲಾರೆವು ಎಂದು ಅವರು ಹೇಳಿದ್ದಾರೆ. ಏನಿದ್ದರೂ ಯೋಗ ಗುರುವಿನ ಆಗ್ರಹವನ್ನು ಕಣ್ಣುಮುಚ್ಚಿ ವಿರೋಧಿಸಬೇಕಿಲ್ಲ ಎಂದು ಜೆಎನ್‌ಯು ಅಧ್ಯಾಪಕರ ಸಂಘದ ಅಭಿಪ್ರಾಯವಾಗಿದೆ. ಆದ್ದರಿಂದ ಹಿಂದುತ್ವ ಹೇಳದೆ ಯೋಗ ಹೇಳಿ ಕೊಡಲು ರಾಮ್‌ದೇವ್‌ರಿಗೆ ಅವಕಾಶ ದೊರಕಲಿದೆ. ಜೆಎನ್‌ಯುನಲ್ಲಿ ಇತ್ತೀಚೆಗಿನ ವಿವಾದದ ಹಿನ್ನೆಲೆಯಲ್ಲಿ ರಾಮ್‌ದೇವ್ ಪಾಸಿಟಿವ್ ಎನರ್ಜಿ ಸೃಷ್ಟಿಸಲಿದ್ದಾರಂತೆ. ಯೋಗವನ್ನು ವಿರೋಧಿಸಲಾಗದಿರುವುದರಿಂದ ವಿದ್ಯಾರ್ಥಿ ಸಂಘಟನೆಯ ಮುಂದೆ ಸವಾಲು ಸೃಷ್ಟಿಯಾಗಿದೆ.







