ಕಾಂಗ್ರೆಸ್ ಎಂದರೆ ಸಾವು
ಸಂಸತ್ತಿನಲ್ಲಿ ಹರಿಹಾಯ್ದ ಪ್ರಧಾನಿ ಮೋದಿ

ಹೊಸದಿಲ್ಲಿ, ಮಾ . 9: ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ :
# " ಸಾವಿನ ಬಗ್ಗೆ ಒಂದು ವಿಚಿತ್ರ ಸಂಗತಿ ಇದೆ. ಯಾರೂ ಸಾವನ್ನು ದೂರುವುದಿಲ್ಲ. ಅದರ ಸಾವಿನ ಕಾರಣವನ್ನು ಮಾತ್ರ ದೂರುತ್ತಾರೆ - ಉದಾ.: ಕ್ಯಾನ್ಸರ್ ಇತ್ಯಾದಿ. ನನಗನಿಸುತ್ತದೆ, ಕಾಂಗ್ರೆಸ್ ಗೂ ಇಂತಹ ವರ ಸಿಕ್ಕಿದೆ. ಸಾವಿನ ಹಾಗೆ ಕಾಂಗ್ರೆಸ್ ಗೂ ಕೆಟ್ಟ ಹೆಸರು ಬರುವುದಿಲ್ಲ . ಯಾವತ್ತೂ " ವಿಪಕ್ಷದ ಮೇಲೆ ದಾಳಿ " ಎಂದೇ ಹೇಳಲಾಗುತ್ತದೆ, " ಕಾಂಗ್ರೆಸ್ ಮೇಲೆ ದಾಳಿ " ಎಂದೇ ಹೇಳಲಾಗುತ್ತದೆ.
# " ನಾನು ಗುಲಾಂ ನಬಿ ಆಝಾದ್ ಅವರಿಗೆ ಕ್ರತಜ್ಞನಾಗಿದ್ದೇನೆ. ಅವರು ಜನ ಧನ್ ಯೋಜನೆಯಲ್ಲಿ ಖಾತೆ ಇಲ್ಲದವರ ದಾಖಲೆ ತಂದಿದ್ದಾರೆ. ಇದಕ್ಕಾಗಿ ಅವರು ಮೈಕ್ರೋ ಸ್ಕೋಪ್ ಹಿಡಿದು ಕೆಲಸ ಮಾಡಿದಂತೆ ಕಾಣುತ್ತದೆ. ಅವರ ಸರಕಾರ ಇರುವಾಗ ಅವರು ಕೇವಲ ಬೈನಾಕುಲರ್ ಬಳಸಿ ಕೆಲಸ ಮಾಡಿದ್ದರೂ ಸಾಕಷ್ಟು ಕೆಲಸ ಆಗುತ್ತಿತ್ತು."
# " ಎರಡು ರೀತಿಯ ಜನ ಇರುತ್ತಾರೆ - ಒಂದು ಕೆಲಸ ಮಾಡುವವರು - ಇನ್ನೊಂದು ಯಾರೋ ಮಾಡಿದ ಕೆಲಸಕ್ಕೆ ಹೆಸರು ತೆಗೆದುಕೊಳ್ಳುವವರು. ಮೊದಲ ವಿಭಾಗದಲ್ಲಿ ಸ್ಪರ್ಧೆ ಕಡಿಮೆ ಇರುವುದರಿಂದ ಆ ವಿಭಾಗಕ್ಕೆ ಸೇರುವಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕರೆ ಕೊಟ್ಟಿದ್ದರು. "
# ನಾನು ಮನಮೋಹನ್ ಸಿಂಗ್ ಅವರಂತೆ ಅರ್ಥ ಶಾಸ್ತ್ರಜ್ಞ ಅಲ್ಲ , ಹಾಗಾಗಿ ಅವರಷ್ಟು ಜ್ಞಾನ ನನಗಿಲ್ಲ. ಆದರೆ ನಾನು ಕೆಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ.
# " ತೀವ್ರ ಬೇಸಿಗೆಯ ಸಮಯದಲ್ಲಿ ನಾವು ಗುಜರಾತ್ ನ ಹಳ್ಳಿಗಳಿಗೆ ಹೋಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ ನಡೆಸುತ್ತಿದ್ದೆವು. ಅವರಿಗಿರುವ ಸುಳಭ್ಯಗಳ ಕೊರತೆಯ ಬಗ್ಗೆ ನಾವು ಚಿಂತಿಸಿ ಆ ಕ್ಷೇತ್ರದಲ್ಲಿರುವ ಸವಾಲುಗಳನ್ನು ಎದುರಿಸಬೇಕಿದೆ. "
# ಇದು ಅತಿರಥರು ಇರುವ ರಾಜ್ಯಸಭೆ. ಇಲ್ಲಿ ಏನಾಗುತ್ತೆ ಅದು ಈ ದೇಶದ ಅಸೆಂಬ್ಲಿ ಗಳ ಮೇಲೂ ಪರಿಣಾಮ ಬೀರುತ್ತೆ. ಯೋಚನೆಗಳ ಚೇಂಬರ್ ಇದು. ದೇಶವನ್ನು ಇದು ಮುನ್ನಡೆಸಬೇಕಿದೆ. ಇಡೀ ದೇಶ ಇಲ್ಲಿ ಕೆಲವು ಮಸೂದೆಗಳನ್ನು ಪಾಸ್ ಮಾಡಲು ಕಾಯುತ್ತಿದೆ. ಲೋಕಸಭೆಯಲ್ಲಿ ಈಗಾಗಲೇ ಪಾಸ್ ಆಗಿರುವ ಈ ಮಸೂದೆಗಳನ್ನು ಪಾಸ್ ಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕಿದೆ.
# " ಅಲ್ಪ ಸ್ವಲ್ಪ ಬೆಳವಣಿಗೆಯ ಬದಲು ಸಮಗ್ರ , ಕ್ಷಿಪ್ರ ಬೆಳವಣಿಗೆ ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಪಾರದರ್ಶಕತೆಗೆ ಒತ್ತು ನೀಡುತ್ತಿದ್ದೇವೆ. ದಶಕಗಳಿಂದ ಬಾಕಿಯಾಗಿದ್ದ ಮೂಲಭೂತ ಸೌಲಭ್ಯಗಳ ಯೋಜನೆ ಪೂರ್ಣಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ. ವಿಕೇಂದ್ರೀಕರಣ ಉತ್ತಮ ಆಡಳಿತದ ಇನ್ನೊಂದು ಮಜಲಾಗಿದೆ. "
# " ಸಬ್ಸಿಡಿ ಕೇವಲ ಅರ್ಹರಿಗೆ ಮಾತ್ರ ಸಿಗುವಂತೆ ನಾವು ಮಾಡುತ್ತಿದ್ದೇವೆ. ಇದು ಕೇವಲ ದುಡ್ಡು ಉಳಿಸುವ ಪ್ರಶ್ನೆಯಲ್ಲ. "
# " ಎಪ್ರಿಲ್ ೧೪ ಕ್ಕೆ ರಾಷ್ಟ್ರೀಯ ಕೃಷಿ ಬಾಝಾರ್ ಪ್ರಾರಂಭವಾಗಲಿದೆ. ೨೦೨೨ ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ನಾವು ಕೆಲಸ ಮಾಡಬೇಕಿದೆ. "
# ಸ್ವಚ್ಛತೆ ಈಗ ದೊಡ್ಡ ಆಂದೋಲನವಾಗಿದೆ. ಸ್ವಾತಂತ್ರ್ಯದ ಬಳಿಕ ನಮ್ಮ ಸಂಸತ್ತಲ್ಲಿ ಯಾವತ್ತೂ ಸ್ವಚ್ಛತೆ ಬಗ್ಗೆ ಚರ್ಚೆಯಾಗಿಲ್ಲ. ಈಗ 2-3 ಗಂಟೆ ಚರ್ಚೆಯಾಗುತ್ತಿದೆ. ಸರಕಾರವನ್ನು ಟೀಕಿಸಿದರೂ ಕೆಲಸವಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಬಡವರು ದುಬಾರಿ ಔಷಧಿ ಖರೀದಿಸಬೇಕಾಗಿದೆ. "
# " ಸಫರ್ ಮೇ ಧೂಪ್ ತೋ ಹೋಗಿ ( ಪ್ರಯಾಣದಲ್ಲಿ ಬಿಸಿಲಿರುವುದು ಸಹಜ) " ಎಂಬ ಕವಿ ನಿದಾ ಫ಼ಝ್ಲಿ ಸಾಲುಗಳೊಂದಿಗೆ ಪ್ರಧಾನಿ ಮಾತು ಮುಗಿಸಿದರು.







