ಸುರತ್ಕಲ್: ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ
ಸುರತ್ಕಲ್, ಮಾ.9: ಇಲ್ಲಿನ ಬಾಳಿಕೆ ರ್ಶರೀ ಕೋಡ್ದಬ್ಬು ದೈವಸ್ಥಾನದ ಪುನರ್ ಪ್ರತಿಷ್ಠೆ ಕಲಶಾಭಿಷೇಕ ವರ್ಷಾವಧಿ ನೇಮೋತ್ಸವ ಮಾ.10 ರಿಂದ 13 ವರೆಗೆ ದೈವಸ್ಥಾನದ ಚಠಾರದಲ್ಲಿ ನಡೆಯಲಿದೆ ಎಂದು ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಸುರತ್ಕಲ್ ಸೂರಜ್ ಹೋಟೇಲ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ, ಮಾ. 10 ರಿಂದ ತಡಂಬೈಲು ಎಸ್. ಗಣಪತಿ ಮಯ್ಯರವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವದ ಕೈಂಕರ್ಯಗಳು ನಡೆಯಲಿವೆ ಎಂದರು.
ಮಾ. 11 ರಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ವಹಿಸಲಿದ್ದಾರೆ. ರಘುನಾಥ ಶೆಟ್ಟಿ ಕೋಟಿಕಂಡಾಳ ಕಾಯ್ಕಲ್ರಮವನ್ನು ಉದ್ಘಾಟಿಸಲಿದ್ದಾರೆ. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಮಿಜಿಯವರ ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವಾ, ಮಾಜೀ ಸಚಿವ ಕೃಷ್ಣ ಜೆ. ಪಾಲೆಮಾರ್, ಆದಿತ್ಯ ಮುಕ್ಕಾಲ್ದಿ ಖಂಡಿಗೆ ಬೀಡು, ವಿಜಯನಾಥ ವಿಠಲ ಶೆಟ್ಟಿ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ. ಗೋಕುಲ ನಿವಾಸ ಸುರತ್ಕಲ್‌ನ ಗೋಪಾಲ ಎ.ಶೆಟ್ಟಿ ಅವರನ್ನು ಇದೇ ಸಂದರ್ಬ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರುಗಳಾದ ಪ್ರಭಾಕರ ಶೆಟ್ಟಿ, ಕರಿಯ ಮಾರ್ಲ, ವಿಶ್ವನಾಥ ಶೆಟ್ಟಿ, ಕಲಶಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಶಶಿದರ್ ಪಣೆರಮಾರ್, ದಿಲೀಪ್ ಮುಂಚೂರು, ಬಾಳಿಕೆ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.





