ಪುತ್ತೂರು: ಶಾರ್ಟ್ ಸರ್ಕ್ಯೂಟ್: ರಬ್ಬರ್ ತೋಟಕ್ಕೆ ಬೆಂಕಿ
ಪುತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿ ಖಾಸಗಿ ವ್ಯಕ್ತಿಯೊಬ್ಬರ ರಬ್ಬರ್ ತೋಟಕ್ಕೆ ಬೆಂಕಿ ಹಬ್ಬಿ 100ಕ್ಕೂ ಅಧಿಕ ರಬ್ಬರ್ ಗಿಡಗಳು ಸುಟ್ಟು ಹೋಗಿ ನಷ್ಟ ಸಂಭವಿಸಿದ ಘಟನೆ ಬುಧವಾರ ಮುಂಜಾನೆ ಪುತ್ತೂರು ತಾಲೂಕಿನ ಕಾಣಿಯೂರು ಎಂಬಲ್ಲಿ ನಡೆದಿದೆ. ಕಾಣಿಯೂರು ಗ್ರಾಮದ ಪೈಕ ಸೀತಾರಾಮ ಗೌಡ ಎಂಬವರಿಗೆ ಸೇರಿದ ರಬ್ಬರ್ ತೋಟಕ್ಕೆ ಬೆಂಕಿಗಾಹುತಿಯಾಗಿದ್ದು, ಸ್ಥಳೀಯರನ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ಮತ್ತು ಬೆಂಕಿಯು ಪಕ್ಕದ ಅಭಯಾರಣ್ಯಕ್ಕೆ ಹಬ್ಬುವುದನ್ನು ತಪ್ಪಿಸಿದ್ದಾರೆ. ವಿದ್ಯುತ್ ಲೈನ್‌ನಲ್ಲಿ ಉಂಟಾಗಿರುವ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವುದಾಗಿ ತಿಳಿದು ಬಂದಿದೆ ಸ್ಥಳೀಯರಾದ ದಿನೇಶ್ , ತೀರ್ಥಪ್ರಸಾದ್ , ಸುಲಕ್ಷಣ ರೈ, ವಿಠಲ ಗೌಡ, ಪದ್ಮಯ್ನ ಗೌಡ ಹರೀಶ್ ಮತ್ತಿತರರು ಸೇರಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.
Next Story





