ಮೂಡುಬಿದಿರೆ: ಹುಡ್ಕೋ ಕಾಲನಿ ಪಾರ್ಕ್ ಉದ್ಘಾಟನೆ

ಮೂಡುಬಿದಿರೆ : ಪ್ರಾಂತ್ಯ ಗ್ರಾಮದ ಹುಡ್ಕೋ ಕಾಲನಿ ಮತ್ತು ಕೆ. ಎಚ್. ಬಿ ಕಾಲನಿಗಳಲ್ಲಿ ಪುರಸಭೆಯ ವತಿಯಿಂದ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾರ್ಕ್‌ನ್ನು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನವಸತಿಯಿರುವ ಪ್ರದೇಶಗಳ ಖಾಲಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಪಾರ್ಕ್‌ಗಳನ್ನು ನಿರ್ಮಿಸುವ ಮೂಲಕ ಆ ಪರಿಸರವನ್ನು ಸುಂದರಗೊಳಿಸಿದೆ. ಜೊತೆಗೆ ಜನರ ವಿಹಾರಕ್ಕೆ, ಮಕ್ಕಳ ಆಟೋಟಕ್ಕೆ ಅವಕಾಶ ಕಲ್ಪಿಸಿದೆ. ಪುರಸಭೆಯು ನಿರ್ಮಿಸಿದ ಈ ಪಾರ್ಕ್‌ಗಳನ್ನು ಜನರು ಉತ್ತಮ ರೀತಿಯಲ್ಲಿ ಬಳಕೆ ಮಾಡಬೇಕು. ಯಾವುದೇ ವಸ್ತುಗಳಿಗೆ ಹಾನಿಯೆಸಗಬಾರದು ಎಂದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಪುರಸಭೆ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಪುರಸಭಾ ಸದಸ್ಯೆ ವನಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಉಪಾಧ್ಯಕ್ಷ ಪ್ರೇಮಾನಾಥ ಮಾರ್ಲ ಹುಡ್ಕೋ ಕಾಲನಿ ನಿವಾಸಿಗಳ ಸಂಘದ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ, ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪುರಸಭಾ ಕಂದಾಯ ನಿರೀಕ್ಷಕ ಧನಂಜಯ ಮತ್ತಿತರರು ಉಪಸ್ಥಿತರಿದ್ದರು.





