ವಿಶ್ವ ಸಂಸ್ಕೃತಿ ಉತ್ಸವಕ್ಕೆ ಗ್ರೀನ್ ಟ್ರಿಬ್ಯುನಲ್ ನ 'ಗ್ರೀನ್ ಸಿಗ್ನಲ್'
ಷರತ್ತುಬದ್ಧ ಅನುಮತಿ ,ಐದು ಕೋಟಿ ರೂ. ದಂಡ

ಹೊಸದಿಲ್ಲಿ, ಮಾ.9: ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ದಿಲ್ಲಿಯ ಯಮುನಾ ನದಿ ದಂಡೆಯಲ್ಲಿ ಮಾ.11ರಿಂದ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇಂದು ಷರತ್ತುಬದ್ಧ ಅನುಮತಿ ನೀಡಿದೆ
ಇಂದು ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಉತ್ಸವ ಆರಂಭಕ್ಕೂ ಮುನ್ನ ಐದು ಕೋಟಿ ದಂಡ ಕಟ್ಟುವಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಆದೇಶ ನೀಡಿದೆ.
ವಿಚಾರಣೆಯ ವೇಳೆ ಜಲಸಂಪನ್ಮೂಲ ಸಚಿವಾಲಯ ಹಸಿರು ನ್ಯಾಯಮಂಡಳಿ ತಾನು ಉತ್ಸವಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿತ್ತು. ಇದೇ ವೇಳೆ "ನೀವು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ" ಎಂದು ಹಸಿರು ನ್ಯಾಯ ಮಂಡಳಿ ಕೇಂದ್ರ ಪರಿಸರ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿತ್ತು. ಉತ್ಸವಕ್ಕಾಗಿ ಆರ್ಟ್ ಆಫ್ ಲಿವಿಂಗ್ ವ್ಯಯಿಸುತ್ತಿರುವ ಖರ್ಚು ಎಷ್ಟು, ಸೇತುವೆ ಇವುಗಳ ಬಗ್ಗೆ ಪೂರ್ಣ ವಿವರ ನೀಡುವಂತೆನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚನೆ ನೀಡಿತ್ತು.
ಯಮುನಾ ನದಿ ದಂಡೆಯಲ್ಲಿ ಸೈನಿಕರು ನಿರ್ಮಿಸಿದ ಕೃತಕ ಸೇತುವೆ ಎಷ್ಟು ಗಟ್ಟಿಯಾಗಿರಬಲ್ಲದು ಎನ್ನುವ ಬಗ್ಗೆಯೂ ಹಸಿರು ನ್ಯಾಯ ಮಂಡಳಿ ಕಿಡಿಕಾರಿತ್ತು.





