ಅಸೆಂಬ್ಲಿ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ್ತೆ ಸೋಲಾಗಬಹುದೆಂಬ ಭೀತಿ ರಾಹುಲ್‌ರನ್ನು ಕಾಡುತ್ತಿದೆಯೇ?

ನವದೆಹಲಿ : ಮುಂದಿನ ಮೂರು ತಿಂಗಳೊಳಗೆ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳು ನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಕಾಂಗ್ರೆಸ್ ಪಕ್ಷ ಹಾಗೂ ಅದರಉಪಾಧ್ಯಕ್ಷ ರಾಹುಲ್ ಗಾಂಧಿ ಪಾಲಿಗೆ ಬಹಳ ಮಹತ್ವದ್ದಾಗಿದ್ದು ಇತ್ತೀಚಿಗಿನ ಸಮೀಕ್ಷೆಗಳ ಪ್ರಕಾರ ನಾಯಕತ್ವ ರೇಟಿಂಗ್‌ನಲ್ಲಿ ರಾಹುಲ್ ಕೆಲವು ಅಂಕಗಳನ್ನು ಹೆಚ್ಚಿಗೆ ಪಡೆದಿದ್ದಾರೆ.ಚುನಾವಣೆ ನಡೆಯುವ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಪಕ್ಷ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದರೆ, ಕೇರಳದಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿದೆ.
ಈ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ ಮುಂದಿನ ವರ್ಷ ಉತ್ತರ ಪ್ರದೇಶ, ಗುಜರಾತ್, ಪಂಜಾಬ್‌ನಲ್ಲಿ ಹಾಗೂ 2018ರಲ್ಲಿ ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ನಡೆಯುವ ಚುನಾವಣೆಗಳು 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಆಗಲಿವೆಯೆಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್8ರಾಜ್ಯಗಳಲ್ಲಿ ತನ್ನ ಮುಖ್ಯಮಂತ್ರಿಗಳನ್ನು ಹೊಂದಿದ್ದರೆ, ಬಿಹಾರದಲ್ಲಿ ಕೂಡ ಅಧಿಕಾರ ಹಂಚಿಕೊಂಡಿದೆ. ಹಿಮಾಚಲ ಪ್ರದೇಶ, ಉತ್ತರಖಂಡ, ಮಿಜೋರಂ, ಮೇಘಾಲಯ ಹಆಗೂ ಮಣಿಪುರದಿಂದ ಪಕ್ಷಕ್ಕೆ ಐದಕ್ಕಿಂತ ಕಡಿಮೆ ಸಂಸದರಿದ್ದಾರೆ. ಕಾಂಗ್ರೆಸ್ ಸ್ವತಂತ್ರವಾಗಿ ಆಡಳಿತ ನಡೆಸುತ್ತಿರುವುದು ಕೇಲ ಕರ್ನಾಟಕ, ಕೇರಳ ಹಾಗೂ ಅಸ್ಸಾಂನಲ್ಲಿ. ಕೆಲವೊಂದು ಸಮೀಕ್ಷೆಗಳ ಪ್ರಕಾರ ಈ ಮೂರು ರಾಜ್ಯಗಳ ಪೈಕಿ ಎರಡು ರಾಜ್ಯಗಳು ಪಕ್ಷದ ಕೈತಪ್ಪಿ ಹೋಗಲಿದೆ.
ಅಸ್ಸಾಂ :ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಅಧಿಕಾರಲ್ಲಿದ್ದರೂ ಆಂತರಿಕ ಕಲಹ ಹಾಗೂ ಆಡಳಿತ ವಿರೋಧಿ ಅಲೆಯಿಂದ ಮುಕ್ತವಾಗಿಲ್ಲ. ಆರ್ಥಿಕತೆಯೂ ಅಷ್ಟೊಂದು ಉತ್ತಮವಾಗಿಲ್ಲವಾಗಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಳೆದ 30 ವರ್ಷಗಳಲ್ಲೇ ಮೊದಲ ಬಾರಿಗೆ ಬಿಜೆಪಿ 30ಶೇ, ಮತಗಳನ್ನು ಪಡೆದಿದೆ. ಹೆಚ್ಚಿನ ಹಿಂದೂ ಮತಗಳು ಪಕ್ಷದ ಕೈತಪ್ಪಿ ಹೋಗಿವೆ. ಪ್ರಸಕ್ತ ಅಸ್ಸಾಂ ಗಣ ಪರಿಷದ್ ಹಾಗೂ ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಬಿಜೆಪಿಯಂದಿಗೆ ಮೈತ್ರಿ ಸಾಧಿಸಿದ್ದು ಇದು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿದೆ.
ಕೇರಳ :ಪ್ರತಿ ಚುನಾವಣೆಯ ನಂತರವೂ ಆಡಳಿತ ಪಕ್ಷವನ್ನು ಹೊರ ಹಾಕುವ ಇತಿಹಾಸ ಕಳೆದ ಮೂರು ದಶಕಗಳಿಂದ ಕೇರಳದ್ದಾಗಿದೆ. ಇದು ಈ ಬಾರಿಯೂ ನಿಜವಾದರೆ, ಎಡ ರಂಗವು ಚುನಾವಣೆ ಗೆಲ್ಲಬಹುದು. ರಾಜ್ಯದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತ ಅವಧಿಯಲ್ಲಿಅಭಿವೃದ್ಧಿ ತೃಪ್ತಿಕರವಾಗಿದ್ದರೂ ಹಲವಾರು ಹಗರಣಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಪ್ರಥಮ ಬಾರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 10ರಷ್ಟು ಮತಗಳನ್ನು ಪಡೆದಿತ್ತು.
ಪಶ್ಚಿಮ ಬಂಗಾಳ :ಇಲ್ಲಿ ಕಾಂಗ್ರೆಸ್ ಪ್ರಮುಖ ಸ್ಪರ್ಧಿಯಲ್ಲವಾಗಿದ್ದು ಮುಖ್ಯ ಸ್ಪರ್ಧೆ ಆಡಳಿತ ತೃಣಮೂಲ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ನಡುವೆ ನಡೆಯಲಿದೆ. ಎಡ ಪಕ್ಷಗಳು ಸುರ್ಜ್ಯ ಕಾಂತ್ ಮಿಶ್ರಾರನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತಮ ಆಡಳಿತ ನೀಡಿರುವರಾದರೂನ ಗರ ಪ್ರದೇಶಗಳಲ್ಲಿ ಹಾಗೂ ಅಲ್ಪಸಂಖ್ಯಾತ ವರ್ಗಗಳಲ್ಲಿ ಅವರು ಅಷ್ಟು ಜನಪ್ರಿಯರಾಗಿಲ್ಲ. ಕಾಂಗ್ರೆಸ್ ಒಂದೋ ಇಲ್ಲಿ ಎಡ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಬೇಕು ಇಲ್ಲವೇ ತೃಣಮೂಲ ಕಾಂಗ್ರೆಸ್ಸನ್ನು ಸೋಲಿಸಲು ಪಣ ತೊಡಬೇಕು.
ತಮಿಳು ನಾಡು :ಕಾಂಗ್ರೆಸ್ ಈ ರಾಜ್ಯದಲ್ಲಿ ತನ್ನ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ಡಿಎಂಕೆ ನೇತೃತ್ವದ ಮೈತ್ರಿ ಕೂಟಕ್ಕೆ ಸೇರಿಕೊಂಡಿರುವ ಪಕ್ಷ ಬಿಹಾರದಲ್ಲಾದಂತೆ ಇಲ್ಲಿ ಕೂಡ ಕೆಲವು ಕ್ಷೇತ್ರಗಳಲ್ಲಿ (50ಕ್ಕಿಂತಲೂ ಕಡಿಮೆ) ಸ್ಪರ್ಧಿಸಬಹುದು.ಈ ರಾಜ್ಯ ಕೂಡ ಕೇರಳದಂತೆ ಆಡಳಿತ ಪಕ್ಷಗಳನ್ನು ಪ್ರತಿ ಚುನಾವಣೆಯ ನಂತರ ಕೆಳಗಿಳಿಸಿದೆ. ಆದರೆ ಈ ಬಾರಿ ಇದು ನಡೆಯಲಿಕ್ಕಿಲ್ಲವೆಂಬ ಭಾವನೆಯಿದೆ. ಕೆಲವೊಂದು ಸಮೀಕ್ಷೆಗಳ ಪ್ರಕಾರ ಜಯಲಲಿತಾರ ಎಐಎಡಿಎಂಕೆಡಿಎಂಕೆಗಿಂತ ಸ್ವಲ್ಪವೇ ಮುಂದಿದ್ದರೂಆಕೆಯ ಜನಪ್ರಿಯತೆ ಉತ್ತರ ತಮಿಳುನಾಡಿನಲ್ಲಿ ಹೆಚ್ಚಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಹೆಚ್ಚಿನ ಸಾಧ್ಯತೆಗಳು ತಮಿಳುನಾಡಿನಲ್ಲಿದ್ದರೆ, ನಂತರದ ಸಾಧ್ಯತೆ ಕೇರಳ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿವೆ. ಆದರೆ ಮುಂದಿನ ಒಂದೆರಡು ತಿಂಗಳಲ್ಲಿ ಪಕ್ಷ ತನ್ನ ಪರಿಸ್ಥಿತಿ ಸುಧಾರಿಸದೇ ಹೋದಲ್ಲಿ ಎಲ್ಲಾ ರಾಜ್ಯಗಳಲ್ಲೂ ಸೋಲನ್ನನುಭವಿಸಬಹುದು.
5 ವರ್ಷಗಳ ರಾಹುಲ್ ರಿಪೋರ್ಟ್ ಕಾರ್ಡ್ :
2011 ರಾಹುಲ್ ಪಾಲಿಗೆ ಅತ್ಯುತ್ತಮ ವರ್ಷವಾಗಿತ್ತು. ಈ ವರ್ಷದಲ್ಲಿ ಪಕ್ಷ ವಿಧಾನಸಭೆ ಚುನಾವಣೆಗಳು ನಡೆದ ನಾಲ್ಕು ರಾಜ್ಯಗಳಲ್ಲಿ ಮೂರನ್ನು ಅಂದರೆ ಅಸ್ಸಾಂ, ಕೇರಳ ಹಾಗೂ ಪಶ್ಚಿಮಬಂಗಾಳದಲ್ಲಿ ಮಮತಾ ಜತೆಗೂಡಿ ಗೆದ್ದುಕೊಂಡಿತ್ತು.ಆದರೆ 2012ರಲ್ಲಿ ಚುನಾವಣೆಗಳು ನಡೆದ ಎಲ್ಲಾ ಮೂರು ರಾಜ್ಯದಲ್ಲಿ ಪಕ್ಷ ನೆಲ ಕಚ್ಚಿದ್ದರೆ ಕರ್ನಾಟಕದಲ್ಲಿ ಮಾತ್ರ ಪಕ್ಷ ವಿಜಯ ಸಾಧಿಸಿತ್ತು. ಇಲ್ಲಿ ಯಡಿಯೂರಪ್ಪ ಬಿಜೆಪಿಯಿಂದ ಆಗ ಹೊರನಡೆದಿದ್ದು ಪಕ್ಷದ ಪಾಲಿಗೆ ಮುಳುವಾಗಿತ್ತು. 2015ರಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಒಂದೇ ಒಂದುಸೀಟು ಪಡೆಯಲು ವಿಫಲವಾಗಿದ್ದರೆ, ಬಿಹಾರದಲ್ಲಿ ನಿತೀಶ್-ಲಾಲು ನಾಯಕತ್ವದ ಮಹಾಮೈತ್ರಿಕೂಟದ ಸಹಾಯದಿಂದ ತನ್ನ ಮುಖ ಉಳಿಸುವಲ್ಲಿ ಸಫಲವಾಗಿತ್ತು.
‘ಕಾಂಗ್ರೆಸ್ ಮುಕ್ತ್ ಭಾರತ’ ಆಗುತ್ತಿದೆಯೇ?
ಈಮೇಲಿನಂಶಗಳನ್ನು ಗಮನಿಸುವಾಗಪ್ರಧಾನಿ ನರೇಂದ್ರ ಮೋದಿಯವರ ‘ಕಾಂಗ್ರೆಸ್ ಮುಕ್ತ್ ಭಾರತ್’ ಘೋಷಣೆ ನಿಜವಾಗುತ್ತಿರುವಂತೆ ತೋರುತ್ತದೆ. ಕಾಂಗ್ರೆಸ್ ಇನ್ನಷ್ಟು ಸಂಘಟಿತಗೊಳ್ಳುವ ಅಗತ್ಯವಿದೆಯೆಂದು ಇದು ತೋರಿಸುತ್ತಿದೆಯಲ್ಲದೆ ಎಲ್ಲಾ ಹಂತಗಳಲ್ಲಿಯೂ ಮಹತ್ತರ ಬದಲಾವಣೆಗಳನ್ನು ತರುವ ಕಾಲ ಸನ್ನಿಹಿತವಾಗಿದೆಯೆಂಬುದು ರಾಜಕೀಯ ಪ0ಡಿತರ ಅಭಿಪ್ರಾಯ. ಆದರೆ ಅಂತಹ ಬೆಳವಣಿಗೆಗಳೇನೂ ಮತದಾರನಿಗೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಆದರೆ ಪಕ್ಷ ಇನ್ನೂ ಹೀನಾಯ ಸೋಲು ಕಾಣುತ್ತಾ ಹೋದರೆ ರಾಹುಲ್ ನಾಯಕತ್ವವನ್ನು ಪಕ್ಷ ಕಾರ್ಯಕರ್ತರು ಪ್ರಶ್ನಿಸುವ ಎಲ್ಲಾ ಸಾಧ್ಯತೆಗಳಿವೆಯೆಂದು ಹೇಳಲಾಗುತ್ತಿದೆ.







