ಬಾಂಗ್ಲಾಕ್ಕೆ ಹಾಲೆಂಡ್ ವಿರುದ್ಧ 8 ರನ್‌ಗಳ ರೋಚಕ ಜಯ

ಧರ್ಮಶಾಲಾ, ಮಾ.9:ಬಾಂಗ್ಲಾದೇಶ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಪ್ರಥಮ ಸುತ್ತಿನ ‘ಎ’ ಗುಂಪಿನ ಪಂದ್ಯದಲ್ಲಿ ಇಂದು ಹಾಲೆಂಡ್ ವಿರುದ್ಧ 8 ರನ್‌ಗಳ ರೋಚಕ ಜಯ ದಾಖಲಿಸಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ಔಟಾಗದೆ 83 ರನ್ ಗಳಿಸಿ ಬಾಂಗ್ಲಾದೇಶ ತಂಡದ ಸ್ಕೋರ್‌ನ್ನು 150ರ ಗಡಿ ದಾಟಿಸಲು ನೆರವಾಗಿದ್ದರು. ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ಹಾಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತು.
Next Story





