ಪ್ರಾಂಶುಪಾಲರಿಗೆ ಖುದ್ದು ಹಾಜರಿಗೆ ಹೈಕೋರ್ಟ್ ನಿರ್ದೇಶನ
ವಿದ್ಯಾರ್ಥಿನಿಯಿಂದ ಕಡಿಮೆ ಅಂಕದ ಆರೋಪ
ಬೆಂಗಳೂರು, ಮಾ.9: ಎಂಜಿನಿಯ ರಿಂಗ್ ವಿದ್ಯಾರ್ಥಿನಿಯೊಬ್ಬರಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಅಂಕ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಂದಾಪುರ ಸಮೀಪದ ಮೂಡ್ಲಕಟ್ಟೆ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶು ಪಾಲರು ಖುದ್ದಾಗಿ ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಮುನವ್ವರ್ ಸುಲ್ತಾನಾ ಎಂಬ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರಿದ್ದ ನ್ಯಾಯಪೀಠ ಇದೆ 21ರಂದು ಪ್ರಾಂಶು ಪಾಲರು ಅಗತ್ಯ ದಾಖಲಾತಿಗಳೊಂದಿಗೆ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಬೇಕು ಎಂದು ಆದೇಶಿಸಿದೆ. ಮುನವ್ವರ್ ಸುಲ್ತಾನಾ ಎಂಬ ವಿದ್ಯಾರ್ಥಿನಿಯು ನನಗೆ ಎಂಟನೆ ಸೆಮಿಸ್ಟರ್‌ನಲ್ಲಿ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಲಾಗಿದೆ ಎಂದು ದೂರಿ ಈ ಅರ್ಜಿ ಸಲ್ಲಿಸಿದ್ದಾರೆ.
Next Story





