ಉರ್ದು ಅಕಾಡಮಿಗೆ ಅಝೀಝುಲ್ಲಾ ಬೇಗ್ ಅಧ್ಯಕ್ಷ

ಬೆಂಗಳೂರು, ಮಾ.9: ರಾಜ್ಯ ಉರ್ದು ಅಕಾಡಮಿಗೆ ನಿವೃತ್ತ ಐಎಎಸ್ ಅಧಿಕಾರಿ ಅಝೀಝುಲ್ಲಾ ಬೇಗ್‌ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಉರ್ದು ಅಕಾಡಮಿ ಅಧ್ಯಕ್ಷೆ ಡಾ.ಫೌಝಿಯಾ ಚೌಧರಿ ಅವರ ಸ್ಥಾನಕ್ಕೆ ಅಝೀಝುಲ್ಲಾ ಬೇಗ್‌ರನ್ನು ನೇಮಕ ಮಾಡಲಾಗಿದ್ದು, ಇವರ ಅಧಿಕಾರಾವಧಿಯು 13 ತಿಂಗಳಷ್ಟಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅಕ್ರಮ್ ಪಾಷ ಅಧಿಸೂಚನೆ ಹೊರಡಿಸಿದ್ದಾರೆ.
Next Story





