ಮಹದಾಯಿ ಹೋರಾಟ
ರಾಜಕಾರಣಿಗಳ ದ್ವಂದ್ವ ನೀತಿಯೂ ಪರದಾಡುತ್ತಿರುವ ರೈತರೂ...
ಮಹದಾಯಿ, ಕಳಸಾ ಬಂಡೂರಿ ನದಿ ನೀರಿನ ವಿಷಯದಲ್ಲಿ ನಮ್ಮನ್ನಾಳುಠ್ಛಿಠಿಜಿರುವ ಸಚಿವರು, ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಗಳು, ಪ್ರಧಾನಿಗಳು ಇದುವರೆಗೆ ನಿರ್ಲಕ್ಷ್ಯ ಭಾವನೆ ತಾಳಿದ್ದರಿಂದ ಮಹದಾಯಿ ನದಿ ನೀರಿನ ಜೋಡಣೆ ಈಗಲೂ ಕಗ್ಗಂಟಾಗಿದೆ. ಮಹದಾಯಿ-ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮೊನ್ನೆ ಶನಿವಾರ 150ನೆ ದಿನಕ್ಕೆ ಕಾಲಿರಿಸಿದ್ದು, ರಾಜಕೀಯ ಧುರೀಣರು ಮೊದಮೊದಲು ರೈತರ ಧರಣಿಯಲ್ಲಿ ಪಾಲ್ಗೊಂಡಂತೆ ಮಾಡಿ, ಸದ್ಯದ ಸ್ಥಿತಿಯಲ್ಲಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ರೈತರು ಕಳೆದ 15 ದಿನಗಳ ಹಿಂದೆ ಮಹದಾಯಿ ನದಿ ಜೋಡಣೆಗೆ ಧರಣಿ ನಡೆಸಿ ಮಹದಾಯಿ ನದಿ ಜೋಡಣೆ ತಮ್ಮಿಂದಾಗದಿದ್ದರೆ ರಾಜೀನಾಮೆ ಕೊಡಿ ಎಂದು ಶಾಸಕರನ್ನು, ಸಂದರನ್ನು, ಸಚಿವರನ್ನು ಒತ್ತಾಯಿಸಿದರೆ ರಾಜ್ಯ ಸರಕಾರ ಪೊಲೀಸರನ್ನು ಛೂ ಬಿಟ್ಟು ರೈತರ ಮೇಲೆ ಲಾಠಿ-ಬೂಟಿನ ಪ್ರಹಾರ ಮಾಡಿಸಿದ್ದರಿಂದ ರೈತರು ಕುಪಿತಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ದಿಲ್ಲಿಯಲ್ಲಿ ರೈತರು ಧರಣಿ ನಡೆಸಲಿದ್ದಾರೆ. ಜು. 16 ರಿಂದ ಪ್ರಥಮವಾಗಿ ಮಹದಾಯಿ ನದಿ ನೀರಿಗೆ ಆಗ್ರಹಿಸಿ ನರಗುಂದದಲ್ಲಿಯೇ ಆರಂಭಗೊಂಡ ಧರಣಿ ಸದ್ಯದ ಸ್ಥಿತಿಯಲ್ಲಿ ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುವಂತೆ ಮಾಡಿದೆ. ಮಹದಾಯಿ ನದಿ ನೀರಿನ ಕುರಿತು ನೀಡಿದ್ದ ಭರವಸೆ ಮರೆತು, ಆಯಾ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆಗೆದುಕೊಳ್ಳಿ ಎಂದು ಈ ಹಿಂದೆ ಧಾರವಾಡ-ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ರೈತರು ಮಾತನಾಡಿದರೆ, ಜನಪ್ರತಿನಿಧಿಗಳು ಇದನ್ನು ಧಿಕ್ಕರಿಸಿ ರೈತರ ಮೇಲೆ ದಬ್ಬಾಳಿಕೆ ನಡೆಸುವುದರ ಜೊತೆಗೆ ಪೊಲೀಸರಿಗೆ ಸಂದೇಶ ನೀಡಿ ಈ ಹೋರಾಟಗಾರರನ್ನು ಬಂಧಿಸಿ ಎಂದು ಅಪ್ಪಣೆ ಕೊಟ್ಟಿದ್ದರೆಂಬುದು ಈಗ ಬಹಿರಂಗ ಸಂಗತಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಆಳುವ ಎಲ್ಲ ಸರಕಾರಗಳು ರೈತರ ಹಿತಾಸಕ್ತಿಯನ್ನೇ ಮರೆತಿವೆ. ಸರಕಾರಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯದಲ್ಲಿ ಪ್ರತಿ ಶಾಸಕರು 1.75 ಲಕ್ಷ ರೂಪಾಯಿ ಮಾಸಿಕ ಸಂಬಳ ಪಡೆಯುತ್ತಿದ್ದಾರೆ. ಶಾಸಕರು, ಸಂಸದರು ಆಯ್ಕೆಯಾದ ಮೇಲೆ ರೈತರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕುವುದರಿಂದ ವಿಧಾನ ಪರಿಷತ್ ಚುಣಾವಣೆ ಬಹಿಷ್ಕರಿಸಲು ಎಲ್ಲ ರೈತ ಮತದಾರರು ಮುಂದಾದರು. ಈಚೆಗೆ ದಿಲ್ಲಿಗೆ ನಿಯೋಗ ಕೊಂಡೊಯ್ದಿಗ ಪ್ರಧಾನಿಗಳು ಸರಿಯಾಗಿ ಈ ಯೋಜನೆ ಕುರಿತು ಮಾತನಾಡಲಿಲ್ಲ. ಧರಣಿಯಲ್ಲಿ ಪಾಲ್ಗೊಂಡು ನೀರಿನ ಯೋಜನೆ ಬಗ್ಗೆ ರೈತರಿಗೆ ಭರವಸೆ ನೀಡಿದ್ದ ಪ್ರಹ್ಲಾದ ಜೋಶಿ ನಿಯೋಗದಲ್ಲಿ ಹೋದಾಗ ಪ್ರಧಾನಿಯವರ ಬಳಿ ಈ ಕುರಿತು ಚರ್ಚಿಸಲಿಲ್ಲ. ಪ್ರಧಾನಿ ನೀಡಿದ್ದ ಭೋಜನಕೂಟದಲ್ಲಿ ಜನಪ್ರತಿನಿಧಿಗಳು ಅಲ್ಲಿ ಪಾಲ್ಗೊಂಡರೆ ಹೊರತು ಮಹದಾಯಿ ಯೋಜನೆ ಕುರಿತು ವಿಸ್ತ್ರತ ಚರ್ಚೆ ನಡೆಸಲೇ ಇಲ್ಲ...