ಕಳ್ಳರಿಗೆ ಕಾಣದ 30 ಪವನ್ ಚಿನ್ನ!

ಬ್ರಹ್ಮಾವರ, ಮಾ.9: ಇಲ್ಲಿಗೆ ಸಮೀಪದ ಆರೂರು ಗ್ರಾಮದ ಬೆಳ್ಮಾರು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳವಿಗಾಗಿ ಮನೆಗೆ ನುಗ್ಗಿ ವಸ್ತುಗಳನ್ನು ಜಾಲಾಡಿದ ಕಳ್ಳರು ಮನೆಯಲ್ಲೇ ಇದ್ದ 30 ಪವನ್ ಚಿನ್ನಾಭರಣಗಳನ್ನು ಹಾಗೆಯೇ ಬಿಟ್ಟು ಬರಿಗೈಯಲ್ಲಿ ಮರಳಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳ್ಮಾರಿನ ರವಿವರ್ಮ ರಾವ್ ಅವರು ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ಹೊರಹೋಗಿದ್ದರು. ಆ ಸಮಯದಲ್ಲಿ ಮನೆಯ ಶೌಚಾಲಯದ ಮರದ ಬಾಗಿಲಿನ ಚಿಲಕವನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿದ್ದರು.
ಕೋಣೆಯಲ್ಲಿದ್ದ ಗೋದ್ರೆಜ್ ಹಾಗೂ ಚಾವಡಿಯಲ್ಲಿದ್ದ ಕವಾಟಿನ ಬೀಗ ಒಡೆದಿದ್ದು, ಅವುಗಳಲ್ಲಿದ್ದ ಸುಮಾರು 30 ಪವನ್ ಚಿನ್ನ ಕಳ್ಳರ ಕಣ್ಣು ತಪ್ಪಿಸಿ ಯಥಾಸ್ಥಿತಿಯಲ್ಲಿ ಉಳಿದುಕೊಂಡಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





