ಶೇಷ ಭಾರತಕ್ಕೆ ಕಠಿಣ ಸವಾಲು
ಮುಂಬೈ,ಮಾ.9: ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಟೂರ್ನಿಯಲ್ಲಿ ಶೇಷ ಭಾರತ ತಂಡ ಮುಂಬೈ ವಿರುದ್ಧದ ಗೆಲುವಿಗೆ 480 ರನ್ ಕಠಿಣ ಗುರಿ ಪಡೆದಿದೆ.
4ನೆ ದಿನವಾದ ಬುಧವಾರ ಶೇಷ ಭಾರತ ತಂಡ ಮುಂಬೈಯನ್ನು 2ನೆ ಇನಿಂಗ್ಸ್‌ನಲ್ಲಿ 182 ರನ್‌ಗೆ ಆಲೌಟ್ ಮಾಡಿ ಗಮನ ಸೆಳೆಯಿತು. ಜಯಂತ್ ಯಾದವ್(4-93), ಜೈದೇವ್ ಉನದ್ಕಟ್(3-16) ಹಾಗೂ ಸ್ಟುವರ್ಟ್ ಬಿನ್ನಿ(2-41) 9 ವಿಕೆಟ್‌ಗಳನ್ನು ಹಂಚಿಕೊಂಡರು.
ಮುಂಬೈನ ಪರ ಸಿದ್ದೇಶ್ ಲಾಡ್(60 ರನ್), ಸೂರ್ಯಕುಮಾರ್ ಯಾದವ್(49) ಹಾಗೂ ಬಿಸ್ತ್(38) ಎರಡಂಕೆ ದಾಟಿದರು.
ಮೊದಲ ಇನಿಂಗ್ಸ್‌ನಲ್ಲಿ 297 ರನ್ ಮುನ್ನಡೆ ಪಡೆದಿದ್ದ ಮುಂಬೈ ತಂಡ ಶೇಷ ಭಾರತದ ಗೆಲುವಿಗೆ 480 ರನ್ ನೀಡಿತು.
2ನೆ ಇನಿಂಗ್ಸ್ ಆರಂಭಿಸಿರುವ ಶೇಷ ಭಾರತ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಫೈಝ್ ಫಝಲ್(41),ಸುದೀಪ್ ಚಟರ್ಜಿ(17) ಕ್ರೀಸ್‌ನಲ್ಲಿದ್ದಾರೆ.
Next Story





