ಮಗುವನ್ನು ಚೀಲದಲ್ಲಿ ತುಂಬಿಸಿಟ್ಟು ವಿಮಾನದಲ್ಲಿ ಪ್ರಯಾಣಿಸಿದ ಮಹಿಳೆ!

ಇಸ್ತಾಂಬುಲ್, ಮಾರ್ಚ್.10: ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಸಮೀಪದಲ್ಲಿ ಕೂತವರ ಬ್ಯಾಗ್‌ನಲ್ಲಿ ಏನೋ ಚಲಿಸಿದರೆ ನೀವು ಹೌಹಾರುವುದಿಲ್ಲವೇ? ಇಂತಹ ಒಂದು ಅನುಭವ ಇಸ್ತಾಂಬುಲ್‌ನಿಂದ ಪ್ಯಾರಿಸ್‌ಗೆ ಹೋಗುವ ವಿಮಾನದ ಪ್ರಯಾಣಿಕರಿಗೆ ಆಗಿದೆ.
ಮಹಾತಾಯಿಯೊಬ್ಬಳು ಟಿಕೆಟ್ ಹಣವುಳಿಸಲಿಕ್ಕಾಗಿ ಒಂದು ವರ್ಷ ವಯಸ್ಸಿನ ಮಗುವನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದಳು. ಮಗು ಬ್ಯಾಗ್‌ನಲ್ಲಿ ಅತ್ತಿತ್ತ ಶರೀರವನ್ನು ಚಲಿಸಲು ತೊಡಗಿತ್ತು. ಇದನ್ನು ಈ ಮಹಿಳೆಯ ಪಕ್ಕದ ಸೀಟಿನಲ್ಲಿ ಕುಳಿತ ಇನ್ನೊಬ್ಬಳು ಮಹಿಳೆ ನೋಡಿ ಹೆದರಿ ಕಂಪಿಸತೊಡಗಿದ್ದಳು. ಏಯರ್ ಫ್ರಾನ್ಸ್ ವಿಮಾನ ಎಎಫ್ 1891ರಲ್ಲಿ ಈ ಘಟನೆ ಸೋಮವಾರ ರಾತ್ರಿ ನಡೆದಿತ್ತು.
ಕೂಡಲೇ ತನಿಖೆ ಆರಂಭಿಸಲಾಯಿತು. ಈ ವಿಷಯವನ್ನು ಕೂಡಲೇ ಕ್ಯಾಬಿನ್ ಕ್ರೂವಿಗೆ ತಿಳಿಸಲಾಯಿತು. ಟರ್ಕಿ ಅತಾತುರ್ಕ್ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಅರ್ಧ ದೂರವನ್ನು ಕ್ರಮಿಸಿತ್ತು. ಮಹಿಳೆಯ ಕೈಯಲ್ಲಿದ್ದ ಬಟ್ಟೆಯ ಚೀಲದಲ್ಲಿ ಮಗುವನ್ನು ಅಡಗಿಸಿಡಲಾಗಿತ್ತು. ಯಾವುದೋ ಅಗತ್ಯಕ್ಕೆ ಮಹಿಳೆ ಬ್ಯಾಗ್ ತೆರೆದಾಗ ಇದನ್ನು ಓರ್ವ ಮಹಿಳೆ ಬ್ಯಾಗ್‌ನೊಳಗೆ ಏನೋ ಅಂದಾಡುತ್ತಿರುವುದನ್ನು ನೋಡಿದ್ದರು.
ಘಟನೆ ಕುರಿತು ಪ್ರಯಾಣಿಕರನ್ನು ಸಂತೈಸುವ ಅನೌನ್ಸ್ ಮೆಂಟ್‌ಗಳೂ ಆಗಿಲ್ಲವೆಂದು ಸಹಪ್ರಯಾಣಿಕರು ದೂರಿದ್ದಾರೆ. ಮಗುವಿಗೆ ಟಕೆಟ್ ತೆಗೆಯದೆ ಪ್ರಯಾಣಿಸುವ ಉದ್ದೇಶದಿಂದ ಮಗುವನ್ನು ಆ ಮಹಿಳೆ ಚೀಲದಲ್ಲಿ ಅಡಗಿಸಿಟ್ಟಿದ್ದಳೆನ್ನಲಾಗಿದೆ.







