ಮಗುವಿನೊಂದಿಗೆ 24ಗಂಟೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್!

ರಾಂಚಿ,ಮಾರ್ಚ್.10: ರಾಂಚಿ ಪೊಲೀಸ್ ಪಿಸಿಆರ್ ವ್ಯಾನ್ ಸಂಖ್ಯೆ ಹನ್ನೆರಡರ ಚಾಲಕ ತನ್ನ ಪುತ್ರಿಯನ್ನು ಕರೆದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅವರ ಪತ್ನಿ ರೋಗಿಯಾಗಿರುವುದರಿಂದ ಮಗುವಿನತ್ತ ಗಮನ ಕೊಡಬೇಕಾದ ಅನಿವಾರ್ಯತೆ ಈ ತಂದೆಗಿದೆ. ಎದೆಗಾನಿಸಿಕೊಂಡು ಅವರು ವ್ಯಾನ್ ಚಾಲನೆ ನಡೆಸುತ್ತಿದ್ದಾರೆ. ಮಗು ಆಡುವ ಮೈದಾನ ಕೂಡಾ ಪಿಸಿಆರ್ ವ್ಯಾನೇ ಆಗಿದೆ.
ಪೊಲೀಸ್ ವ್ಯಾನ್ ಚಾಲಕ ಉತ್ತಮ್ ಕುಮಾರ್ ಪತ್ನಿಯ ಅನಾರೋಗ್ಯದಿಂದಾಗಿ ಒಂದೇ ಸಮಯ ಎರಡೆರಡು ಕರ್ತವ್ಯವನ್ನು ನಿರ್ವಹಿಸುವಂತಾಗಿದೆ. ಮಗುವಿನ ಸಂರಕ್ಷಣೆ ಉಚಿತ ರೀತಿಯಲ್ಲಿ ನಡೆಯಬೇಕೆಂದು ಅವರು ಮಗುವನ್ನು ತನ್ನ ಜೊತೆಯೇ ಇರಿಸಿಕೊಂಡಿದ್ದಾರೆ. ಪತ್ನಿಯ ಉಪಚಾರಕ್ಕೆ ರಜೆ ದೊರಕುತ್ತಿಲ್ಲ. ಜೊತೆಗೆ ಅವರ ಪತ್ನಿಯ ಅಂತಹ ಸಂಬಂಧಿಕರು ಜೊತೆಗಿಲ್ಲ. ಮಗುವನ್ನು ವಹಿಸಿಕೊಟ್ಟು ಹೋಗುವಂತಿಲ್ಲ. ವಾತಾವರಣ ಕೆಟ್ಟಿರುವಾಗಲೂ ಮಗುವಿನೊಂದಿಗೆ ವ್ಯಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂರು ದಿನಗಳಿಂದ ಮಗುವಿಗೆ ಪಿಸಿಆರ್ ವ್ಯಾನ್ ಮನೆಯೇ ಆಗಿದೆ. ಆಟ ಇತರ ಪೊಲೀಸರ ಮಡಿಲಾಗಿದೆ. ಉತ್ತಮ್‌ರ ಸಹೋದ್ಯೋಗಿಗಳಾದ ಪೊಲೀಸರು ಕೂಡಾ ಮಗುವಿನ ಆರೈಕೆ ಮಾಡುತ್ತಾರೆ. ಪೊಲೀಸಧಿಕಾರಿ ಎಸ್.ಎನ್.ಪ್ರಧಾನ್ ಪೊಲೀಸ್ ಕಾನ್‌ಸ್ಟೇಬಲ್‌ಗಳು24ಗಂಟೆ ಕರ್ತವ್ಯದಲ್ಲಿರುತ್ತಾರೆ. ಹೊರತಾಗಿ ಯಾವುದೇ ಕಾನ್‌ಸ್ಟೇಬಲ್‌ಗೆ ರಜೆಯ ಅಗತ್ಯವಿದ್ದರೆ ನೀಡಲಾಗುತ್ತದೆ. ಯಾವುದೇ ಪೊಲೀಸನಿಗೆ ಅತೀ ಅಗತ್ಯವಿಲ್ಲದೆ ರಜೆ ನೀಡಲಾಗುವುದಿಲ್ಲ. ನನಗೆ ತಿಳಿಸಿದರೆ ರಜೆ ನೀಡಲಾಗುವುದು ಎಂದು ಹೇಳಿದ್ದಾರೆ.





