Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶ್ರೀ ಶ್ರೀ ರವಿಶಂಕರ್ ಯಮುನಾ ನದಿಯನ್ನು...

ಶ್ರೀ ಶ್ರೀ ರವಿಶಂಕರ್ ಯಮುನಾ ನದಿಯನ್ನು ಕೊಲ್ಲುತ್ತಿದ್ದಾರೆ : ವಿಮಲೆಂದು ಝಾ

‘ಕಲ್ಬುರ್ಗಿಯನ್ನು ಕೊಂದಿದ್ದೇವೆ ಎಂದು ಬಹಿರಂಗವಾಗಿ ಹೇಳುವವರಿಂದ ನನಗೆ ಸರ್ಟಿಫಿಕೇಟ್ ಬೇಡ’

ವಾರ್ತಾಭಾರತಿವಾರ್ತಾಭಾರತಿ10 March 2016 2:51 PM IST
share
ಶ್ರೀ ಶ್ರೀ ರವಿಶಂಕರ್ ಯಮುನಾ ನದಿಯನ್ನು ಕೊಲ್ಲುತ್ತಿದ್ದಾರೆ : ವಿಮಲೆಂದು ಝಾ

ಹಿಂದೂ ಮಹಾ ಸಭಾದ ಸ್ವಾಮಿ ಓಂಜೀ ಪ್ರಕಾರ ಪರಿಸರ ಕಾರ್ಯಕರ್ತ ವಿಮಲೆಂದು ಝಾ ಒಬ್ಬ ‘ದೇಶ ವಿರೋಧಿ,’ ಒಬ್ಬ ‘ಉಗ್ರವಾದಿ,’ ‘ಹಿಂದು-ವಿರೋಧಿ’ ಹಾಗೂ ಸಿಐಎ ಏಜಂಟ್.ಏಕೆ? ಝಾ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್‌ರವರ ಆರ್ಟ್ ಆಫ್ ಲಿವಿಂಗ್ ಪರಿಸರ ಸೂಕ್ಷ್ಮ ಯಮುನಾ ನದಿ ತೀರದಲ್ಲಿಆಯೋಜಿಸುತ್ತಿರುವ ಬೃಹತ್ ಸಾಂಸ್ಕೃತಿಕಉತ್ಸವವನ್ನು ವಿರೋಧಿಸುತ್ತಿದ್ದಾರೆ. ಈ ವಿಶ್ವ ಸಾಂಸ್ಕೃತಿಕ ಉತ್ಸವವು ಮಾರ್ಚ್ 10, 11 ಹಾಗೂ 13ರಂದು ನಡೆಯಲಿದೆ.

ಈ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಝಾಇದೀಗ ಚೇಂಜ್.ಆರ್ಗ್‌ನಲ್ಲಿ ದೂರು ದಾಖಲಿಸಿದ್ದು ಇದಕ್ಕೆ ಈಗಾಗಲೇ 21.047 ಮಂದಿಯ ಬೆಂಬಲ ದೊರಕಿದೆ. ಈ ಸಾಂಸ್ಕೃತಿಕ ಉತ್ಸವವನ್ನು ಅವರೇಕೆ ವಿರೋಧಿಸುತ್ತಿದ್ದಾರೆ ಹಾಗೂ ಅವರು ಎದುರಿಸಿದ ಬೆದರಿಕೆಗಳ ಬಗ್ಗೆ ಈ ಸಂದರ್ಶನದಲ್ಲಿ ಝಾ ಮಾತನಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ ನೀವು ವಿರೋಧ ವ್ಯಕ್ತಪಡಿಸಲು ಕಾರಣವೇನು?

ಈ ಕಾರ್ಯಕ್ರಮವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಜನವರಿ 13,2015ರಂದು ನೀಡಿದ ‘ಮೈಲಿ ಸೆ ನಿರ್ಮಲ್ ಯಮುನಾ’ ತೀರ್ಪಿನಸಂಪೂರ್ಣ ಉಲ್ಲಂಘನೆಯಾಗಿದೆ. ಯಮುನಾ ತೀರಕ್ಕೆ ತೊಂದರೆಯುಂಟು ಮಾಡಬಾರದೆಂದೂ ಹಾಗೂ ಅಲ್ಲಿರುವ ಕಾಡು ಸಸ್ಯಗಳಿಗೆ ಕೂಡ ಹಾನಿ ಮಾಡಬಾರದೆಂದು, ಅವುಗಳು ಮಾಲಿನ್ಯದಿಂದ ರಕ್ಷಿಸಲು ಹಾಗೂಅಂತರ್ಜಲ ಹೆಚ್ಚಿಸಲು ಸಹಕಾರಿಯೆಂದು ಅದು ಹೇಳಿದೆ.

*ಆಯೋಜಕರು ಅತ್ಯಂತ ಪರಿಸರ ಸೂಕ್ಷ್ಮ ಯಮುನಾ ನದಿ ತೀರದ 1700 ಎಕರೆ ಪ್ರದೇಶವನ್ನು ಜಲಸಂಪನ್ಮೂಲ ಸಚಿವಾಲಯದ, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಯಾವುದೇ ಅನುಮತಿಯಿಲ್ಲದೆ ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದಾರೆ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಷರತ್ತುಬದ್ಧ ಅನುಮತಿ ಪಡೆದಿದ್ದಾರೆ. ನದಿ ತೀರದ ಪ್ರದೇಶಗಳಲ್ಲಿದ್ದ ಕಾಡು ಸಸ್ಯಗಳೆಲ್ಲವೂ ಈಗ ಇಲ್ಲವಾಗಿದೆ.

*ಈ ಕಾರ್ಯಕ್ರಮಕ್ಕೆ 3.5 ಲಕ್ಷ ಜನ ಬರುವರೆಂದು ಡಿಡಿಎ ಅದಕ್ಕೆ ಅನುಮತಿ ನೀಡಿದ್ದರೆ ಈ ಕಾರ್ಯಕ್ರವಕ್ಕೆ ಆಗಮಿಸುವ ಜನರ ನಿಜವಾದ ಸಂಖ್ಯೆ 35 ಲಕ್ಷವಾಗಬಹುದು. ಇಂತಹ ಬೃಹತ್ ಸಂಖ್ಯೆಯ ಜನರು ಬಂದಾಗ ಈ ಪ್ರದೇಶಕ್ಕಾಗುವ ಹಾನಿಯ ಬಗ್ಗೆ ಯೋಚಿಸಿ. ಇದೆಲ್ಲಾ ಪರಿಸರದ ವೆಚ್ಚದಲ್ಲಿಯೇ? ಇಲ್ಲ.

*ಈ ಬೃಹತ್ ಕಾರ್ಯಕ್ರಮ ಆಯೋಜನೆಗಾಗಿಭಾರೀ ಸಂಪನ್ಮೂಲಗಳನ್ನು ಬಳಸಲಾಗುತ್ತಿದ್ದು ಸೇನೆಯ ಸಹಾಯ ಕೂಡ ಪಡೆಯಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ. ಇಲ್ಲಿಗೆ ಆಗಮಿಸುವ 35 ಲಕ್ಷ ಜನರ ಜೀವಕ್ಕೆ ಎಷ್ಟು ಅಪಾಯವೊಡ್ಡಲಾಗುತ್ತಿದೆಯೆಂದು ಯೋಚಿಸಿ.

ನೀವು ಯಾವ ತರಹದ ಬೆದರಿಕೆಗಳನ್ನು ಎದುರಿಸಿದ್ದೀರಿ? ಇವುಗಳ ಹಿಂದೆ ಯಾರಿದ್ದಾರೆ?

ನಾವು ಈ ಕಾರ್ಯಕ್ರಮಕ್ಕೆ ವ್ಯಕ್ತಪಡಿಸುತ್ತಿರುವ ವಿರೋಧ ಹಾಗೂ ಯಮುನಾ ನದಿ ಸಂರಕ್ಷಣೆಗೆ ನಮ್ಮ ಬೆಂಬಲವನ್ನು ದೇಶ-ವಿರೋಧಕ್ಕೆ ಹೋಲಿಸುವವರು ಆರ್ಟ್ ಆಫ್ ಲಿವಿಂಗ್‌ನಲ್ಲಿ ಹಲವರಿದ್ದಾರೆ. ಇಂಥವರಿಗೆ ನಾನುನನ್ನ ಮನಸ್ಸಿನಲ್ಲಿ ಯಾ ಮಾಧ್ಯಮದಲ್ಲಿ ಯಾವುದೇ ಸ್ಥಳ ನೀಡಲು ಬಯಸುವುದಿಲ್ಲ. ಇಂದು,ಶ್ರೀ ಶ್ರೀ ರವಿಶಂಕರ್ ಯಮುನಾ ನದಿಗೆ ಮರಣದಂಡನೆ ವಿಧಿಸಿದ್ದಾರೆನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ನೀವು ಯಮುನಾ ನದಿಯ ಸಂರಕ್ಷಣೆಗಾಗಿ ಹೋರಾಡುತ್ತಿದ್ದೀರೆಂದು ಹೇಳುತ್ತಿದ್ದರೂ ನಿಮ್ಮನ್ನು ಹಿಂದೂ-ವಿರೋಧಿ ಎಂದು ಹೇಳಲಾಗುತ್ತಿದೆಯಲ್ಲ?

ರಾಷ್ಟ್ರೀಯತೆ ಹಾಗೂ ಧರ್ಮದ ಬಗೆಗಿನ ನಮ್ಮ ಭಾಷಣಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.ನಾನೊಬ್ಬ ಭಾರತೀಯ ಹಾಗೂ ಹಿಂದೂ ಎನ್ನಲು ಹೆಮ್ಮೆ ಪಡುತ್ತೇನೆ. ಕಲಬುರ್ಗಿಯನ್ನು ಕೊಂದಿದ್ದೇವೆ ಹಾಗೂ ನಿಮ್ಮನ್ನೂ ಕೊಲ್ಲುತ್ತೇವೆ ಎಂದು ಹೇಳುವ ಇಂತಹ ಜನರಿಂದ ನನಗೆ ಯಾವ ಸರ್ಟಿಫಿಕೇಟಿನ ಅಗತ್ಯವಿಲ್ಲ. ಜನರನ್ನು ಹಾಡುಹಗಲೇ ಬೆದರಿಸುವ ಅವರ ಧೈರ್ಯ ನೋಡಿ-ಅದು ಕೂಡ ನ್ಯಾಯಾಲಯದ ಮುಂದೆ, ಮಾಧ್ಯಮ ಮಂದಿಯ ಉಪಸ್ಥಿತಿಯಲ್ಲಿ ಹಾಗೂ ಕೋರ್ಟಿನೊಳಗೆ.

ಈ ಕಾರ್ಯಕ್ರಮ ಆಯೋಜನೆಯನ್ನು ಆರ್ಟ್ ಆಫ್ ಲಿವಿಂಗ್ ಸಮರ್ಥಿಸಿಕೊಳ್ಳಬಹುದೇ?

ಇಂತಹ ಒಂದು ಕಾರ್ಯಕ್ರಮಕ್ಕೆ ಜನರು ಭೇಟಿ ನೀಡಿ ಹಿಂದಿರುಗಬಹುದು. ಆದರೆ ಮುಂದೆಇಂತಹುದೇ ಕಾರ್ಯಕ್ರಮ ನಡೆಸಲು ಇತರರು ಯೋಚಿಸಬಹುದು.ಆದರೆ ಇಷ್ಟೊಂದು ಸಂಖ್ಯೆಯ ಜನರು ಆಗಮಿಸುವಂತಹ ಕಾರ್ಯಕ್ರಮವನ್ನು ಇಂತಹ ಒಂದು ಸ್ಥಳದಲ್ಲಿ ಅನುಮತಿಸಿದರೆ ನದಿಯನ್ನುಹಾಗೂ ದೆಹಲಿಯ ನಾಲೆಗಳನ್ನು ಸಂರಕ್ಷಿಸುವುದು ಅಸಾಧ್ಯದ ಮಾತು. ಇಂತಹ ಕಾರ್ಯಕ್ರಮಕ್ಕೆ ನ್ಯಾಯಾಲಯ ನಿಷೇಧ ಹೇರಿದರಷ್ಟೇ ನಮಗೆ ವಿಜಯ ದೊರೆಯಿತೆಂದು ಹೇಳಬಹುದು.

ಕ್ರಪೆ : catchnews.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X