ಉತ್ತರ ಪ್ರದೇಶ ಶಾಸಕ ಹಾಜಿ ಇರ್ಫಾನ್ ಸಹಿತ ರಸ್ತೆ ಅಪಘಾತದಲ್ಲಿ ಮೂವರ ಮೃತ್ಯು

ಉತ್ತರ ಪ್ರದೇಶ, ಮಾರ್ಚ್.10: ಉತ್ತರ ಪ್ರದೇಶ ಮುರಾದಾಬಾದ್ ಜಿಲ್ಲೆಯ ಬಿಲ್ವಾರಿಯ ಸಮಾಜವಾದಿ ಪಕ್ಷದ ಶಾಸಕ ಹಾಜಿ ಇರ್ಫಾನ್ ರ ಕಾರು ಇಂದು ಬೆಳಗ್ಗೆ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಶಾಸಕ ಸಹಿತ ಮೂವರು ಮೃತರಾಗಿದ್ದಾರೆ. ಅವರ ಗನ್‌ಮ್ಯಾನ್ ಮತ್ತು ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರ್ಘಟನೆಯ ನಂತರ ಸ್ಥಳಕ್ಕೆ ತಲುಪಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಿಲ್ವಾರದ ಶಾಸಕ ಹಾಜಿ ಇರ್ಫಾನ್ ತನ್ನ ಪುತ್ರ ಫಹೀಂ ಮತ್ತು ಸಂಗಡಿಗರೊಂದಿಗೆ ಫಾರ್ಚ್ಯೂನರ್ ಕಾರಿನಲ್ಲಿ ಕ್ಯಾಬಿನೆಟ್ ಸಚಿವ ಶಿವಪಾಲ್ ಯಾದವ್‌ರ ಪುತ್ರನ ಮದುವೆಗೆ ಹೊರಟಿದ್ದರು.
ಈ ನಡುವೆ ಕಛಲಾ ಮುಜರಿಯಾ ರಸ್ತೆಯಲ್ಲಿ ಅತಿವೇಗದಿಂದ ಸಾಗುತ್ತಿದ್ದ ಅವರ ಕಾರು ನಿಯಂತ್ರಣ ಕಳಕೊಂಡು ಮರಕ್ಕೆ ಬಡಿದಿದೆ. ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದರೆ ಇನ್ನೊಬ್ಬರು ಆನಂತರ ಮೃತರಾಗಿದ್ದಾರೆ. ಕಾರು ಸಂಪೂರ್ಣ ನುಜ್ಜುುಗುಜ್ಜಾಗಿದೆಯೆಂದು ವರದಿಯಾಗಿದೆ.
Next Story





