ಸುಳ್ಯ: ಮಹಿಳಾ ಸಮಾಜದಲ್ಲಿ ನೂತನ ವಸತಿ ಗೃಹಕ್ಕೆ ಭೂಮಿ ಪೂಜೆ

ಸುಳ್ಯ ಮಹಿಳಾ ಸಮಾಜದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಲ್ಲಿ ದುಡಿಯುವ ಮಹಿಳೆಯರ ವಸತಿಗೃಹ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಮಹಿಳಾ ಸಮಾಜದ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ತೆರವು ಮಾಡಿ ಅಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಇದಕ್ಕಾಗಿ 25 ಲಕ್ಷ ಅನುದಾನ ಮಂಜೂರು ಮಾಡಿದೆ. ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಹರಿಣಿ ಸದಾಶಿವ, ಕಾರ್ಯದರ್ಶಿ ಇಂದಿರಾ ರೈ, ಖಜಾಂಜಿ ಜಯಲಕ್ಷ್ಮಿ ಮಧುಕರ್, ಎಒಎಲ್‌ಇ ನಿರ್ದೇಶಕಿ ಶೋಭಾ ಚಿದಾನಂದ, ನೇತ್ರಾವತಿ ಪಡ್ಡಂಬೈಲು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ರಾಧಾಮಣಿ, ಕಮಲಾಕ್ಷಿ ಟೀಚರ್, ದೇವಕಿ, ಸುಮಾ ಸುಬ್ಬರಾವ್, ಲಯನೆಸ್ ಕ್ಲಬ್ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಪ್ರಮೀಳಾ ನಳಿನ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಕಾರ್ಯದರ್ಶಿ ಪ್ರಸಾದ್, ಎಂ.ಬಿ.ಸದಾಶಿವ, ಡಿ.ಟಿ.ದಯಾನಂದ, ಎಸ್.ಆರ್.ಸೂರಯ್ಯ, ರಾಮಚಂದ್ರ ಪಲ್ಲತ್ತಡ್ಕ ಮೊದಲಾದವರಿದ್ದರು.





