ಜೆಎನ್ ವಿವಿಯ ಸಂಶೋಧನಾ ವಿದ್ಯಾರ್ಥಿ ನೇಣಿಗೆ ಶರಣು

ಹೊಸದಿಲ್ಲಿ, ಮಾ.10: ಜವಾಹರ‍್ ಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿಯೊಬ್ಬರು ವಿವಿ ಪಕ್ಕದ ಬಾಡಿಗೆ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.
ಉತ್ತರ ಪ್ರದೇಶದ ಬರೇಲಿ ನಿವಾಸಿ ದುಶ್ಯಂತ (25) ಎಂಬವರು ಕೋಣೆಯಲ್ಲಿ ಸಿಲಿಂಗ್ ಫ್ಯಾನ್ ಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ಬೆಳಕಿಗೆ ಬಂದಿದೆ. ಸಾಯುವ ಮುನ್ನ ಬರೆಯಲಾದ ದೆತ್ ನೋಟ್ ಲಭಿಸಿದ್ದು, ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೆತ್ ನೋಟ್ ನಲ್ಲಿ ಬರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,
ಇತ್ತೀಚೆಗೆ ವಿವಿಯಲ್ಲಿ ಕಂಡು ಬಂದಿರುವ ವಿವಾದಕ್ಕೂ ಇವರ ಸಾವಿಗೂ ಸಂಬಂಧ ಇರುವ ಸಾಧ್ಯತೆಯನ್ನು ಪೊಲೀಸರು ನಿರಾಕರಿಸಿದ್ದಾರೆ.
Next Story





