ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ 2014-15ನೇ ಸಾಲಿನ ಬಿ.ಇಡಿ ಪರೀಕ್ಷೆಯಲ್ಲಿ 100% ಫಲಿತಾಂಶ

ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ 2014-15ನೇ ಸಾಲಿನ ಬಿ.ಇಡಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದಿರುತ್ತದೆ. ಕು. ನಯನಾ ಎಸ್. ಹೆಗಡೆ (83.81%), ಕು. ಶ್ವೇತಾ ಆರ್. ಪ್ರಭು (83.09%) ಮತ್ತು ಕು. ಜ್ಯೋತಿ ರಾಮ ಆಚಾರಿ (82.36%) ಕ್ರಮವಾಗಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಫಲಿತಾಂಶವನ್ನು ಪಡೆದಿರುತ್ತಾರೆ. ಈ ಪ್ರಶಿಕ್ಷಣಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಸುರೇಶ ನಾಯಕ ಮತ್ತು ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ಡಾ. ಆರ್. ನರಸಿಂಹಮೂರ್ತಿ ಹಾಗೂ ಉಪನ್ಯಾಸಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Next Story





