ಜಪಾನ್: ಸುನಾಮಿಯ 5 ವರ್ಷಗಳ ಬಳಿಕ ಶೋಧ ಪುನಾರಂಭ

ಟೋಕಿಯೊ, ಮಾ. 10: ಜಪಾನ್‌ನ ಈಶಾನ್ಯ ಕರಾವಳಿಯನ್ನು ಧ್ವಂಸಗೊಳಿಸಿದ 2011ರ ಭೂಕಂಪ ಮತ್ತು ಸುನಾಮಿಯ ಬಳಿಕ ಈಗಲೂ ನಾಪತ್ತೆಯಾಗಿರುವ 2,500ಕ್ಕೂ ಅಧಿಕ ಜನರಿಗಾಗಿ ದೇಶದ ತಟರಕ್ಷಣಾ ಪಡೆ ಈ ವಾರ ನೀರಿನಡಿಯ ಶೋಧವನ್ನು ಪುನಾರಂಭಿಸಿದೆ.
ರಿಕುಝೆಂಟಕಟ ನಗರದ ಕೆಲವು ಕುಟುಂಬಗಳ ಮನವಿಯ ಹಿನ್ನೆಲೆಯಲ್ಲಿ ಆರು ಮುಳುಗುಗಾರರು ಇಂದು ಶೀತಲ ಉಷ್ಣತೆಯಲ್ಲಿ ಹಿರೋಟ ಕೊಲ್ಲಿಯನ್ನು ಪ್ರವೇಶಿಸಿದರು.
ಪ್ರಾಕೃತಿಕ ವಿಪತ್ತು ಪೀಡಿತ ಪ್ರದೇಶದ ಪುನರ್ನಿರ್ಮಾಣ ವೇಗವನ್ನು ಪಡೆದುಕೊಳ್ಳುತ್ತಿದ್ದು, ಕೊಲ್ಲಿಯ ಕೆಲವು ಭಾಗಗಳಲ್ಲಿ ಸಮುದ್ರ ತಡೆಗೋಡೆಗಳನ್ನು ಕಟ್ಟಲಾಗುತ್ತಿದೆ. ಇಲ್ಲಿ ತಡೆಗೋಡೆ ನಿರ್ಮಾಣವಾದರೆ ನಾಪತ್ತೆಯಾಗಿರುವ ತಮ್ಮ ಪ್ರೀತಿಪಾತ್ರರ ಅವಶೇಷಗಳು ಶಾಶ್ವತವಾಗಿ ಹೂತುಹೋಗಬಹುದೆಂಬ ಭೀತಿಯನ್ನು ಇಲ್ಲಿನ ಕುಟುಂಬಗಳು ವ್ಯಕ್ತಪಡಿಸಿವೆ.
Next Story





