ಕರ್ತವ್ಯ ಸ್ಥಗಿತಗೊಳಿಸುವಂತೆ ನ್ಯಾ.ಸುಭಾಷ್ ಅಡಿಗೆ ಸೂಚನೆ
ಉಪ ಲೋಕಾಯುಕ್ತ ಪದಚ್ಯುತಿ
ಬೆಂಗಳೂರು, ಮಾ.10: ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ತಮ್ಮ ಕರ್ತವ್ಯವನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಡಿಪಿಎಆರ್ ಮೂಲಕ ಪತ್ರ ಬರೆದು ಸೂಚಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಕಾನೂನು ತಜ್ಞರೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾ.ಸುಭಾಷ್ ಬಿ.ಅಡಿ ಕರ್ತವ್ಯವನ್ನು ಮುಂದುವರಿಸುವುದಾಗಿ ನನಗೆ ಪತ್ರ ಬರೆದಿದ್ದರು. ಆದರೆ, ಪದಚ್ಯುತಿ ನಿರ್ಣಯ ಕೈಗೊಂಡು ಮುಖ್ಯನ್ಯಾಯಮೂರ್ತಿಗೆ ಪ್ರಸ್ತಾವನೆ ರವಾನಿಸಿದ ಬಳಿಕ ಸಂಬಂಧಪಟ್ಟವರು ಕಾರ್ಯನಿರ್ವಹಿಸುವಂತಿಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.
ಆದುದರಿಂದ, ಡಿಪಿಎಆರ್ ಮೂಲಕ ಮತ್ತೊಂದು ಪತ್ರ ಬರೆದು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವಂತೆ ನ್ಯಾ.ಸುಭಾಷ್ ಬಿ.ಅಡಿಗೆ ಸೂಚಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
Next Story





