ಕಾರ್‌ಸ್ಟ್ರೀಟ್: ಮನೆಗೆಆಕಸ್ಮಿಕ ಬೆಂಕಿ

ಮಂಗಳೂರು, ಮಾ. 10: ನಗರದ ಕಾರಸ್ಟ್ರೀಟ್ ಬಳಿಯ ರಾಘವೇಂದ್ರ ಮಠದ ಬಳಿಯ ಟಿ.ಟಿ. ರಸ್ತೆಯಲ್ಲಿರುವ ಮನೆಯೊಂದು ಆಕಸ್ಮಿಕ ಬೆಂಕಿಗೀಡಾಗಿ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ರಘುವೀರ್ ಎಂಬವರ ಮನೆಗೆ ಆಕಸ್ಮಿಕ ಬೆಂಕಿ ತಗಲಿದ್ದು, ತಕ್ಷಣ ಮನೆಯವರು ಬೆಂಕಿಯನ್ನು ನಂದಿಸಿದರಾದರೂ ಮನೆಯೊಳಗಿದ್ದ ಕೆಲವು ಸಾಮಗ್ರಿಗಳು ಬೆಂಕಿಗಾಹುತಿಯಾಗಿದ್ದವು.
Next Story





