ದಾಂಧಲೆ ಪ್ರಕರಣ: ಆರೋಪಿಗಳಿಗೆ ಜಾಮೀನು
ಉಪ್ಪಿನಂಗಡಿ, ಮಾ.10: ಪುತ್ತೂರಿನಲ್ಲಿ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಮುಗಿಸಿಕೊಂಡು ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ತಂಡವೊಂದು ನಡೆಸಿದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತರ ಪಟ್ಟಿಯಲ್ಲಿದ್ದ ಏಳು ಮಂದಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಕಳೆದ 2015ರ ಜ.16ರಂದು ಪುತ್ತೂರಿನಲ್ಲಿ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ನಡೆದಿದ್ದು, ಅಲ್ಲಿಂದ ಪಿಕ್‌ಅಪ್ ವಾಹನದಲ್ಲಿ ವಾಪಸಾಗುತ್ತಿದ್ದ ತಂಡವೊಂದು ಕರಾಯ ಪೇಟೆಯಲ್ಲಿಯಲ್ಲಿದ್ದ ಮೋನು ಎಂಬವರ ಹೊಟೇಲಿಗೆ ಹಾನಿಯೆಸಗಿ, ಅವರಿಗೆ ಹಲ್ಲೆ ನಡೆಸಿ, ಕೊಲೆಬೆದರಿಕೆಯೊಡ್ಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೋನು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 143, 147, 148, 448, 504, 323, 506, 153(ಎ) ಹಾಗೂ 149 ಐಪಿಸಿ ಮತ್ತು ಕಲಂ 2(ಎ), (ಬಿ) ಕೆಪಿಡಿಎಲ್‌ಪಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ದಿನೇಶ್, ಕಿಶನ್, ಹರೀಶ್ ಗೌಡ, ಲೋಹಿತ್ ಪೂಜಾರಿ, ಅಕ್ಷತ್ ಗೌಡ, ಹರೀಶ್ ಗೌಡ, ಹರೀಶ್ ಎಂಬವರು ಬೆಳ್ತಂಗಡಿಯ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಉಳಿದ ಆರೋಪಿಗಳಿಗೆ ಈ ಹಿಂದೆಯೇ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ಪರ ನ್ಯಾಯವಾದಿ ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲು ವಾದಿಸಿದರು.





