ಗುಜರಾತ್ ಸಿಎಂ ಪುತ್ರಿಗೆ ಭೂ ಮಂಜೂರಿಗೆ ಹಸಿರುನಿಶಾನೆ ನೀಡಿದ್ದು ಮೋದಿ!
ಅಹ್ಮದಾಬಾದ್, ಮಾ.10: ಗುಜರಾತಿನಗಿರ್ ಮೀಸಲು ಅರಣ್ಯ ಪ್ರದೇಶದ ಸಮೀಪವಿರುವ ಭೂಮಿಯನ್ನು ವೈಲ್ಡ್‌ವುಡ್ಸ್‌ರಿಸಾರ್ಟ್ಸ್ ಸಂಸ್ಥೆಗೆ ಮಂಜೂರುಗೊಳಿಸುವುದಕ್ಕೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 2009ರಲ್ಲಿ ಹಸಿರು ನಿಶಾನೆ ನೀಡಿದ್ದರು ಹಾಗೂ ಇದರ ಹಿಂದೆ ಅಂದಿನ ಕಂದಾಯ ಸಚಿವೆ ಹಾಗೂ ಈಗಿನ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್‌ಅವರ ಪುತ್ರಿ ಅನರ್ ಪಟೇಲ್‌ರ ಸಹ ಉದ್ಯಮಿಗಳಿಗೆ ಸಹಾಯ ಮಾಡುವ ಯಾವುದೇ ಉದ್ದೇಶವಿರಲಿಲ್ಲವೆಂದು ಹೈಕೋರ್ಟ್‌ಗೆ ಬುಧವಾರ ಗುಜರಾತ್ ಸರಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತರಾಜಕ್‌ಭಾಯಿ ಬಲೋಚ್‌ಅವರು ಸಲ್ಲಿಸಿದ ದೂರು ಅರ್ಜಿಗೆ ಪ್ರತಿಯಾಗಿ ಸರಕಾರ ಈ ಅಫಿಡವಿಟ್ ಸಲ್ಲಿಸಿದೆ. ‘‘ಈ ಭಾರೀ ಮೌಲ್ಯದ ಭೂಮಿಯನ್ನು ಸರಕಾರ ಗುಪ್ತವಾಗಿ ಯಾವುದೇ ಜಾಹೀರಾತು ನೀಡದೆ ಅತ್ಯಂತ ಕಡಿಮೆದರಕ್ಕೆ ಮಾರಿದೆ’’ ಎಂದು ಬಲೋಚ್‌ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಭೂಮಿಯ ಬೆಲೆ ರೂ 1 ಕೋಟಿಗಿಂತಲೂ ಅಧಿಕವಾಗಿರುವುದರಿಂದ ಹಲವಾರು ಹಂತಗಳ ಅನುಮತಿ ಪ್ರಕ್ರಿಯೆಯ ನಂತರಅದನ್ನು ಮಂಜೂರು ಮಾಡಲಾಗಿತ್ತೆಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ವೈಲ್ಡ್ ವುಡ್ಸ್‌ಗೆ ಈ ಭೂಮಿಯನ್ನು ರೂ 1,67,13,043ಗೆ ಮಂಜೂರು ಮಾಡಲಾಗಿದೆಯೆಂದು ಅಫಿಡವಿಟ್‌ನಲ್ಲಿ ಸರಕಾರ ಹೇಳಿದೆ. ಈ ಭೂಮಿಯ ಮೌಲ್ಯವನ್ನು ಸರಕಾರ ಮಟ್ಟದ ಮೌಲ್ಯೀಕರಣ ಸಮಿತಿ ಪ್ರತಿ ಹೆಕ್ಟೇರಿಗೆ ರೂ.18 ಲಕ್ಷವೆಂದು ನಿಗದಿ ಪಡಿಸಿದ್ದರೆ, ಜಿಲ್ಲಾ ಮಟ್ಟದ ಸಮಿತಿ ಹಾಗೂ ಮುಖ್ಯ ನಗರಯೋಜನಾಧಿಕಾರಿ ಪ್ರತಿ ಹೆಕ್ಟೇರಿಗೆರೂ 1.5 ಲಕ್ಷವೆಂದು ನಿಗದಿ ಪಡಿಸಿದ್ದರು. ಈ ಭೂಮಿ ಸಮತಟ್ಟಾಗಿರದೇ ಇದ್ದುದರಿಂದ ಹಾಗೂ ಗುಡ್ಡ ಪ್ರದೇಶವಾಗಿರುವುದರಿಂದ ಮತ್ತು ಸದ್ಯೋಭವಿಷ್ಯದಲ್ಲಿ ಅಭಿವೃದ್ಧಿಗೊಳ್ಳುವ ಸಂಭವ ಕಡಿಮೆಯಿರುವುದರಿಂದ ಅದನ್ನು ಅಭಿವೃದ್ಧಿ ಪಡಿಸುವ ವೆಚ್ಚ ಅಧಿಕವಾಗುತ್ತದೆ ಎಂದು ಮುಖ್ಯ ನಗರಯೋಜನಾಧಿಕಾರಿ ಅಂದು ಹೇಳಿದ್ದರು.







