ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ: ಸಲ್ಮಾನ್
ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ

ಹೊಸದಿಲ್ಲಿ, ಮಾ.10: ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ ಜೋಧ್‌ಪುರದ ಚೀಫ್ ಜುಡಿಶಿಯಲ್ ಕೋರ್ಟ್‌ನ ಮುಂದೆ ಹಾಜರಾಗಿ, 1998ರ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣದಲ್ಲಿ ತನ್ನ ಹೇಳಿಕೆ ದಾಖಲಿಸಿದ್ದಾರೆ.
ಪ್ರಕರದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆಯೆಂದು ಅವರು ನ್ಯಾಯಾಲಯಕ್ಕೆ ತಿಳಿಸಿದರೆಂದು ಖಾನ್‌ರ ವಕೀಲರು ಬಳಿಕ ಹೇಳಿದರೆಂದು ಎನ್‌ಐ ವರದಿ ಮಾಡಿದೆ.
ಕ್ರಷ್ಣಮೃಗ ಕಳ್ಳ ಬೇಟೆ ಪ್ರಕರಣದ ಕವಲಾಗಿರುವ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ನಿರ್ಣಾಯಕ ಹಾಜರಾತಿ ನೀಡುವುದಕ್ಕಾಗಿ ಸಲ್ಮಾನ್, ನಸುಕಿನಲ್ಲೇ ಮುಂಬೈಯಿಂದ ಜೋಧ್‌ಪುರಕ್ಕೆ ಪ್ರಯಾಣಿಸಿದರೆಂದು ವರದಿಗಳು ತಿಳಿಸಿವೆ.
1998ರಲ್ಲಿ ಜೋಧ್‌ಪುರದಲ್ಲಿ ‘ಹಮ್ ಸಾಥ್ ಸಾಥ್ ಹೈಂ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ, ಖಾನ್ ಹಾಗೂ ಅವರ ಸಹ ನಟರು ಮೂರು ಚಿಂಕಾರಾ ಹಾಗೂ ಒಂದು ಕೃಷ್ಣಮೃಗದ ಕಳ್ಳ ಬೇಟೆಯಾಡಿದ್ದರೆಂದು ಆರೋಪಿಸಲಾಗಿದೆ.
ಗುರುವಾರದ ವಿಚಾರಣೆಯ ವೇಳೆ, ತನ್ನ ಹೆಸರು, ತಂದೆಯ ಹೆಸರು, ವಯಸ್ಸು ಮನೆಯ ವಿಳಾಸ, ಜಾತಿ ಇತ್ಯಾದಿ ಸಾಮಾನ್ಯ ಪ್ರಶ್ನೆಗಳ ಬಗ್ಗೆ ಖಾನ್, ನ್ಯಾಯಾಲಯಕ್ಕೆ ಉತ್ತರ ನೀಡಿದರು. ಆದಾಗ್ಯೂ, ಪ್ರಾಸಿಕ್ಯೂಶನ್ ಹೊರಿಸಿರುವ ಆರೋಪಗಳ ಸಂಬಂಧದ ಪ್ರಶ್ನೆಗೆ,ತಾನು ತಪ್ಪಿತಸ್ಥನಲ್ಲವೆಂದು ಅವರು ಪ್ರತಿಪಾದಿಸಿದರು.
ತಾನು ನಿರ್ದೋಷಿಯಾಗಿದ್ದೇನೆ ತನ್ನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆಯೆಂದು ಖಾನ್ ನ್ಯಾಯಾಲಯಕ್ಕೆ ತಿಳಿಸಿದರು. ಸಲ್ಮಾನ್‌ರ ಸೋದರಿ ಅಲ್ವಿರಾ ಹಾಗೂ ಅಂಗ ರಕ್ಷಕ ಶೇರಾ ಸಹ ವಿಚಾರಣೆಯ ವೇಳೆ ಉಪಸ್ಥಿತರಿದ್ದರು. ಖಾನ್ ಅರ್ಧ ತಾಸಿಗೂ ಕಡಿಮೆ ಸಮಯ ನ್ಯಾಯಾಲಯದಲ್ಲಿದ್ದರು.
ಕಳ್ಳ ಬೇಟೆ ಪ್ರಕರಣದ ಸಂದರ್ಭದಲ್ಲಿ ಖಾನ್‌ರಲ್ಲಿದ್ದ ಒಂದು ರಿವಾಲ್ವರ್ ಹಾಗೂ ರೈಫಲ್‌ಗಳ ಪರವಾನಿಗೆಗಳನ್ನು ಅವರು ನವೀಕರಿಸಿರಲಿಲ್ಲವೆಂದು ಆರೋಪಿಸಿ ಅರಣ್ಯ ಇಲಾಖೆಯ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು/
ಹೇಳಿಕೆ ದಾಖಲಿಸಲು ಹಾಜರಾಗುವಂತೆ ನ್ಯಾಯಾಲಯವು ಮಾ.3ರಂದು ಖಾನ್‌ಗೆ ಆದೇಶ ನೀಡಿತ್ತು.
ತಾನು ಈ ಪ್ರಕರಣದಲ್ಲಿ ಅಮಾಯಕನೆಂದು ಪ್ರತಿಪಾದಿಸಿದ್ದ ಖಾನ್, ಐವರು ಪ್ರಾಸಿಕ್ಯೂಶನ್ ಸಾಕ್ಷಿಗಳ ಮರು ವಿಚಾರಣೆ ನಡೆಸುವಂತೆ ಈ ಹಿಂದೆ ಕೋರಿದ್ದರು ಐವರು ಸಾಕ್ಷಿಗಳ ಮರು ಪ್ರಕ್ರಿಯೆ ಸಿಜೆಎಂ ಕೋರ್ಟ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿತ್ತು.





