ಇಸ್ರೋದಿಂದ ಪಥದರ್ಶಕ ಉಪಗ್ರಹದ ಯಶಸ್ವಿ ಉಡಾವಣೆ

ಚೆನ್ನೈ, ಮಾ.10: ಇಸ್ರೋ ತನ್ನ ಆರನೆ ಪಥದರ್ಶಕ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಎಫ್ ಅನ್ನು ಗುರುವಾರ ತನ್ನ ಉಡಾವಣಾ ನೌಕೆ ಪಿಎಸ್‌ಎಲ್‌ವಿ ಸಿ32ರ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4:01ಕ್ಕೆ ಉಡಾವಣೆ ನಡೆಯಿತು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.
ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಡಿ ಏಳು ಉಪಗ್ರಹಗಳ ಪೈಕಿ ಐದನ್ನು ಇಸ್ರೋ ಈ ಹಿಂದೆಯೇ ಉಡಾವಣೆಗೊಳಿಸಿದೆ. ಏಳನೆ ಉಪಗ್ರಹವನ್ನು ಈ ತಿಂಗಳ ಅಂತ್ಯದಲ್ಲಿ ಉಡಾವಣೆಗೊಳಿಸುವ ನಿರೀಕ್ಷೆಯಿದೆ.
Next Story





