ಬಾಲಕಿಯ ಅತ್ಯಾಚಾರ: ಆರೋಪಿ ವಶ
ಮುಂಡಗೋಡ, ಮಾ.11: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾದ ಘಟನೆ ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಟಬೈಲ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಬಾಲಕಿನ ತಾಯಿ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ವಿನಾಯಕ ವೆಂಕಟೇಶ ನಾಯ್ಕ (35) ಅತ್ಯಾಚಾರ ನಡೆಸಿದ ಆರೋಪಿ ಎಂದು ದೂರಲಾಗಿದೆ. ಫೆ.28 ರಂದು ತನ್ನ ತಮ್ಮನ ಜತೆ ತನ್ನ ಮನೆಯ ಪಕ್ಕ ಇರುವ ಶಾಲೆಯಲ್ಲಿ ನಡೆಯುತ್ತಿದ್ದ ಕಬ್ಬಡ್ಡಿ ಪಂದ್ಯವನ್ನು ನೋಡಲು ಹೋಗಿದ್ದರು ಎಂದು ಹೇಳಲಾಗಿದ್ದು ಆ ಸಮಯದಲ್ಲಿ ಬಾಲಕಿಯ ತಮ್ಮನಿಗೆ ಚಾಕಲೇಟ್ ನೀಡಿ ನೀನು ಇಲ್ಲೇ ಇರು ಎಂದು ಹೇಳಿ ಬಾಲಕಿಯನ್ನು ಗದ್ದೆಗೆ ಕೆರೆದುಕೊಂಡು ಹೋಗಿ ತನ್ನ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಬಾಲಕಿಯ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





