ಗುಜರಾತ್ ಪೊಲೀಸರ ವಿರುದ್ಧ ಕ್ರಮ ರದ್ದುಪಡಿಸುವಂತೆ ವಿನಂತಿಸಿದ ಪಿಐಎಲ್ ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಇಶ್ರತ್ ನಕಲಿ ಎನ್‌ಕೌಂಟರ್

ಹೊಸದಿಲ್ಲಿ: ಬಂಧನದಲ್ಲಿರುವ ಎಲ್‌ಇಟಿ ಉಗ್ರ ಡೇವಿಡ್ ಹೆಡ್ಲಿಯ ಇತ್ತೀಚಿಗಿನ ಹೇಳಿಕೆಗಳ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರ ವಿರುದ್ಧ 2004ರ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಕೈಗೊಳ್ಳಲಾದ ಕಾನೂನು ಕ್ರಮಗಳನ್ನು ರದ್ದುಗೊಳಿಸುವಂತೆ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
‘‘ಸಂವಿಧಾನದ ಅನುಚ್ಛೇದ 32ರ ಉದ್ದೇಶವೇನು? ನೀವು ಅದರಡಿಯಲ್ಲಿ ಇಂತಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ನಿಮಗಿಷ್ಟವಿದ್ದರೆ ನೀವು ಅನುಚ್ಛೇದ 226ರ ಅನ್ವಯ ಹೈಕೋರ್ಟಿನ ಮೊರೆ ಹೋಗಬಹುದು,’’ ಎಂದು ಜಸ್ಟಿಸ್ ಪಿ.ಸಿ. ಘೋಷ್ ಹಾಗೂ ಅಮಿತಾವ ರಾಯ್ಅವರನ್ನೊಳಗೊಂಡ ಪೀಠವು ವಕೀಲ ಎಂ.ಎಲ್. ಶರ್ಮ ಈ ಪ್ರಕರಣದಲ್ಲಿ ತಮ್ಮ ವಾದವನ್ನು ಮಂಡಿಸಲಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಹೇಳಿದರು.
‘‘ಈ ಪ್ರಕರಣದಲ್ಲಿ ಬಾಧಿತರಾದವರು ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು,’’ ಎಂದು ಹೇಳಿದ ಪೀಠ ಈ ವಿಚಾರದಲ್ಲಿ ಬಾಧಿತರಾದ ಅಂದಿನ ಡಿಐಜಿ ಡಿಜಿ ವಂಝಾರ ಮುಂತಾದ ಗುಜರಾತ್ ಪೊಲೀಸರನ್ನುದೋಷಮುಕ್ತಗೊಳಿಸುವಂತೆ ಹೈಕೋರ್ಟಿಗೆ ಅಪೀಲು ಸಲ್ಲಿಸಲು ಅನುವು ಮಾಡಿತು.
ಇಶ್ರತ್ ಎನ್‌ಕೌಂಟರ್‌ನಲ್ಲಿ ಪಾತ್ರವಿದೆಯೆಂದು ಹೇಳಲಾದ ವಂಝಾರ ಸಹಿತ ಹಲವುಗುಜರಾತ್ ಪೊಲೀಸರು ಮುಂಬೈ ಕೋರ್ಟಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಡೇವಿಡ್ ಹೆಡ್ಲೀ ಇತ್ತೀಚೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮುಖಾಂತರ ನೀಡಿದ ಹೇಳಿಕೆಯಿಂದಾಗಿ ಇಶ್ರತ್ ಸಹಿತ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಎಲ್ಲರೂಉಗ್ರವಾದಿಗಳೆಂದುತಿಳಿಯುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ತಿಳಿಸಲಾಗಿತ್ತು.







