ಹೊಸದಿಲ್ಲಿ, ಮಾ.11: ಲೋಸಭೆಯಲ್ಲಿ ಇಂದು ಆಧಾರ‍್ ಮಸೂದೆ ಅಂಗೀಕಾರಗೊಂಡಿದೆ.
ಶಾಸನಾತ್ಮಕ ಸ್ಥಾನಮಾನ ಒದಗಿಸಲು ಹೊಸ ಮಸೂದೆಯನ್ನು ಮಂಡಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ಘೊಷಿಸಿದ್ದರು. ಅದರಂತೆ ಇಂದು ಮಂಡಿಸಲಾದ ಆಧಾರ್ ಮಸೂದೆಗೆ ಹಣಕಾಸು ಮಸೂದೆ ಎಂದು ಪರಿಗಣಿಸಿ ಲೋಕಸಭೆ ಒಪ್ಪಿಗೆ ನೀಡಿದೆ.