ವಿಟ್ಲ: ಮಾರ್ಚ್ 20 ಕ್ಕೆ ಮೇಗಿನಪೇಟೆ ವಿಟ್ಲದಲ್ಲಿ ಬೃಹತ್ ರಕ್ತದಾನ ಶಿಬಿರ

ವಿಟ್ಲ: ಬ್ಲಡ್ ಡೊನರ್ಸ್ ಮಂಗಳೂರು ಮತ್ತು ಡಿ ಗ್ರೂಪ್ ಮೇಗಿನಪೇಟೆ, ವಿಟ್ಲ ಇದರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಬೃಹತ್ ರಕ್ತದಾನ ಶಿಬಿರವು ಇದೇ ಬರುವ ಮಾರ್ಚ್ 20 ರಂದು ಮದ್ರಸಾ ವಠಾರ ಮೇಗಿನಪೇಟೆ, ವಿಟ್ಲ ಇದರ ಸಭಾಂಗನದಲ್ಲಿ ನಡೆಯಲಿದೆ.
ಯಾನಪೋಯ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ದುಃಆ ಕಾರ್ಯಕ್ರಮವನ್ನು ಹಸನ್ ಹರ್ಷದಿ ಬೆಳ್ಳಾರೆ ಖತೀಬರು ಕೇಂದ್ರ ಜುಮ್ಮಾ ಮಸ್ಜಿದ್ ವಿಟ್ಲ ನೆರವೇರಿಸಲಿದ್ದು ಉದ್ಘಾಟನೆಯನ್ನು ವಿ.ಎಚ್ ಅಶ್ರಫ್ ವಿಟ್ಲ, ಅಧ್ಯಕ್ಷರು ಕೇಂದ್ರ ಜುಮ್ಮಾ ಮಸ್ಜಿದ್ ವಿಟ್ಲ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಂ ಅಬ್ದುಲ್ ಸಮದ್ ಅಧ್ಯಕ್ಷರು ಡಿ ಗ್ರೂಪ್ ವಿಟ್ಲ ವಹಿಸಲಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ರಕ್ತದ ಬೇಡಿಕೆಯನ್ನು ಮನಗಂಡ ಬ್ಲಡ್ ಡೊನರ್ಸ್ ಮಂಗಳೂರು ಹಾಗೂ ಡಿ ಗ್ರೂಪ್ ವಿಟ್ಲ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಊರಿನ ಹಲವಾರು ಮುಖ್ಯ ಅತಿಥಿಗಳು ಬಾಗವಹಿಸಲಿದ್ದಾರೆ. ಊರಿನ ಎಲ್ಲಾ ರಕ್ತಧಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.





