ಮಹಿಳೆಯನ್ನು 2 ವರ್ಷಗಳ ಕಾಲ ರೇಪ್ ಮಾಡಿದ ಕ್ಯಾಬ್ ಡ್ರೈವರ್ ಬಂಧನ

ಗುರ್ಗಾಂವ್, ಮಾ.11: ಮೂವತ್ತೈದು ವರ್ಷದ ಮಹಿಳೆಯೊಬ್ಬಳನ್ನು ಎರಡು ವರ್ಷಗಳ ಕಾಲ ಸತತವಾಗಿ ಅತ್ಯಾಚಾರಗೈದ ಆರೋಪದ ಮೇಲೆ ಆಕೆ ಕೆಲಸ ಮಾಡುತ್ತಿರುವ ಕಂಪೆನಿಯ ಕ್ಯಾಬ್ ಡ್ರೈವರ್ ಒಬ್ಬನನ್ನುಗುರುವಾರ ಬಂಧಿಸಲಾಗಿದೆ. ಆರೋಪಿಯನ್ನು ಕಸಾನ್ ಗ್ರಾಮದ ಮನೇಸರ್‌ನ ಹರೀಶ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಆತ ಮೊದಲ ಬಾರಿಗೆ 2014ರಲ್ಲಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ವೇಳೆ ನೀರಿಗೆ ಮತ್ತು ಅಮಲು ಬರಿಸುವ ಔಷಧಿ ಸೇರಿಸಿ ಆಕೆ ಸ್ಮೃತಿ ತಪ್ಪಿ ಬಿದ್ದ ನಂತರ ಆಕೆಯ ಮೇಲೆ ಅತ್ಯಾಚಾರಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಆತ ಕಳೆದ ಎರಡು ವರ್ಷಗಳಲ್ಲಿ ಈ ರೀತಿಯಾಗಿ ಹತ್ತಕ್ಕಿಂತಲೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾನೆಂದು, ಈ ಸಂದರ್ಭ ವೀಡಿಯೊ ಹಾಗೂ ಆಕೆಯ ಭಾವಚಿತ್ರಗಳನ್ನೂ ತೆಗೆದು ಆತ ಅವುಗಳನ್ನುಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹಾಗೂ ಆಕೆಯ ಪತಿಗೆ ತೋರಿಸುವುದಾಗಿ ಆಕೆಯನ್ನು ಬೆದರಿಸಿ ಮತ್ತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನೆಂದೂ ದೂರಿನಲ್ಲಿ ಹೇಳಲಾಗಿದೆ.
ಆತನ ಉಪಟಳ ತಾಳಲಾರದೆ ಆಕೆ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಆತನ ವಿರುದ್ಧದೂರು ದಾಖಲಿಸಿದ್ದಳು. ಸಂತ್ರಸ್ತೆ ದಿಲ್ಲಿ ನಿವಾಸಿಯಾಗಿದ್ದು ತನ್ನ ಪತಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ.







