ಬದುಕುವ ಕಲೆಯನ್ನು ತಂದೆ ತಾಯಿಯಿಂದ ಕಲಿಯದವರಿಗೆ ಈ ಶ್ರೀ ಶ್ರೀ ಅಂತಹವರು...

ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾಡುತ್ತಿರುವ "ದೇಶೋದ್ದಾರದ ಕಾರ್ಯ" ಇಂದು ವಿವಾದವಾಗಿ ಚರ್ಚಯಾಗುತ್ತಿದೆ.. ಸರ್ಕಾರಕ್ಕೆ ಸರ್ಕಾರವೇ ಆತನ ಪಾದಾರವಿಂದಗಳಿಗೆ ಬಿದ್ದು ನದಿ, ಭೂಮಿ,ರಕ್ಷಣೆ ಎಲ್ಲವನ್ನೂ ಸಮರ್ಪಿಸುತ್ತಿದೆ..! ರಾಷ್ಟೃದ್ಯಕ್ಷರು, ಪ್ರಧಾನಿಗಳು ಭಾಗವಹಿಸಲ್ಲವೆಂದಿದ್ದಾರೆ ಆದರೆ ಈ ಕಾರ್ಯಕ್ಕೆ ಬರಲು ಯಾಕೆ ಒಪ್ಪಿಗೆ ಕೊಟ್ಟಿದ್ದರೆಂಬುದು ಅರ್ಥವಾಗುತಿಲ್ಲ!!
ಇಷ್ಟಕ್ಕೂ ಈ ಶ್ರೀ ಶ್ರೀ.. ಯಾರು..? ಈ ದೇಶಕ್ಕೆ ಈತನ ಕೊಡುಗೆಯಾದರೂ ಏನು..? ಈತ ಯಾಕೆ ಸರ್ಕಾರಗಳಿಗೆ 'ಡಾರ್ಲಿಂಗ್' ಆಗಿರ್ತಾನೆ..?
ಈತ 'art of living' ನ ಸೃಷ್ಟಿಕರ್ತ.. ಅಂದರೆ 'ಬದಕುವ ಕಲೆ' ಯನ್ನು ಕಲಿಸುವವನು! ನಾವೆಲ್ಲ ಸಹಜವಾಗಿ ಬದಕುವ ಕಲೆಯನ್ನು ನಮ್ಮ ಅಮ್ಮಾಅಪ್ಪನಿಂದ,ನಮ್ಮ ಬಂದು ಬಳಗ, ನಮ್ಮ ಊರುಕೇರಿ, ನಮ್ಮ ಗುರುಹಿರಿಯರಿಂದ ಕಲಿಯುತ್ತೇವೆ... ಹೀಗೆ ಅಮ್ಮ ಅಪ್ಪನಿಂದ ಸಹಜವಾಗಿ ಕಲಿಯದವರು ಬದುಕುವ ಕಲೆಯನ್ನು ಈ ಶ್ರೀ ಶ್ರೀ ಅಂತವರಿಂದ ಕಲಿಯಬಹುದೇನೋ?
ಈತನ ಆಶ್ರಮದ ಸುತ್ತಲಿನ ಬಡ ದಲಿತರ, ಬಡ ಗ್ರಾಮಸ್ಥರ ಪಾಲಿಗೆ ಈತ land grabber..! ಭೂಗಳ್ಳ..!!
ಈತನ ಆಶ್ರಮ ಮೀಸಲಾತಿ ವಿರೋಧಿ ಚಟುವಟಿಕೆಗೆ ಹೆಸರುವಾಸಿ!? ಹಿಂದುಳಿದ ವರ್ಗಗಳಿಗೆ (ಲಿಂಗಾಯಿತ, ವಕ್ಕಲಿಗ, ಕುರುಬ, ಈಡಿಗ, ಗೊಲ್ಲ, ಅಗಸ, ಕ್ಷೌರಿಕ, ಕುಂಬಾರ,ಉಪ್ಪಾರರಾದಿಯಾಗಿ ಸುಮಾರು 200 ಜಾತಿವರ್ಗಗಳಿಗೆ) 27%ಮೀಸಲಾತಿ ಕೊಟ್ಟಾಗ ಅದರ ವಿರುದ್ಧ ಕೋರ್ಟಿಗೆ ಹೋಗಲು ತಂತ್ರ, ಕುತಂತ್ರ ಹೆಣೆದು 'ಪಿಟಿಷನ್' ತಯಾರಿಸಿದ್ದು ಈತನ 'ಪವಿತ್ರ' ಆಶ್ರಮದಲ್ಲೇ ಎಂಬುದು ಆಗ ತೀವ್ರ ಚರ್ಚೆಯಾಗಿತ್ತು!!
ದಕ್ಷಿಣ ಆಪ್ರಿಕದ ಡರ್ಬನ್ ನಲ್ಲಿ ನಡೆದ 'ವಿಶ್ವ ವರ್ಣಭೇದ ಸಮಾವೇಶದಲ್ಲಿ ನಾವು ಭಾರತದ ಜಾತಿಬೇದ, ಅಸ್ಪೃಶ್ಯತೆ issue ಅನ್ನು ಕೊಂಡೊಯ್ದಿದ್ದೆವು.., ಅಲ್ಲಿಗೆ ಸಂಘಪರಿವಾರದ ಅನಧಿಕೃತ ವಕ್ತಾರನಂತೆ ಬಂದ ರವಿಶಂಕರ "ಭಾರತದಲ್ಲಿ ಜಾತಿಯೂ ಇಲ್ಲ, ಅಸ್ಪೃಶ್ಯತೆಯೂ ಇಲ್ಲ.." ಎಂದು ತಾನೇ ಬರೆದದ್ದೆಂದು ಹೇಳಲಾದ ಪುಸ್ತಕಗಳನ್ನು ಹಂಚುತ್ತಾ ಭಾಷಣ ಮಾಡತೊಡಗಿದ.!
ನಾವೆಲ್ಲ ಹೋಗಿ "ಅರ್ಧ ಗಂಟೆಯಲ್ಲಿ ಜಾಗ ಖಾಲಿ ಮಾಡು ಇಲ್ಲದಿದ್ದಲ್ಲಿ ನಿನಗೆ ನಿನ್ನ ಸುಳ್ಳು ಪುಸ್ತಕಗಳಿಗೆ ಬೆಂಕಿ ಇಡ್ತೇವೆ.." ಎಂದು ಧಮಕಿ ಹಾಕಿದಾಗ ಎದ್ದೆನೋ ಬಿದ್ದೆನೋ ಎಂದು ಓಡಿ ಹೋದವನು.. ಇಂದು ಈ ದೇಶದ ಸಂಸ್ಕೃತಿ ಚಿಂತಕನಾಗಿ ಅವತಾರವೆತ್ತಿದ್ದಾನೆ..!! ಇಂತಹ ದೇಶವಿರೋಧಿಗಳನ್ನು, ಜೀವವಿರೋದಿಗಳನ್ನು ಜೈಲಿಗೆ ಹಾಕುವ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ..







