ಹನ್ನೊಂದು ದಿವಸದಲ್ಲಿ ಸ್ತನ ಕ್ಯಾನ್ಸರ್‌ನ್ನು ಗುಣಪಡಿಸಬಹುದು; ಬ್ರಿಟನ್ ಸಂಶೋಧಕರಿಂದ ಯಶಸ್ವಿ ಪ್ರಯೋಗ

ಬ್ರಿಟನ್, ಮಾರ್ಚ್.11:ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಗತಿ ಸಾಧಿಸಿಯೂ ವಿವಿಧ ರೋಗಗಳನ್ನು ಸಂಪೂರ್ಣ ಗುಣಪಡಿಸಿಯೂ ಕ್ಯಾನ್ಸರನ್ನು ಸಂಪೂರ್ಣ ವಾಸಿಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಕ್ಯಾನ್ಸರ್ ಒಂದು ಪೆಡಂಭೂತವಾಗಿ ಕಾಡುತ್ತಿದೆ. ಮಹಿಳೆಯರಲ್ಲಿ ಸ್ತನಾರ್ಬುದ ಅತಿದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಿದೆ. ಅದಕ್ಕೆ ದೊಡ್ಡ ಮಟ್ಟದ ಚಿಕಿತ್ಸೆ ಇಂದು ಲಭ್ಯವಿದ್ದರೂ ಅದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಾಗಿಲ್ಲ. ಆದರೆ ಈಗಿದೋ ಸ್ತನ ಕ್ಯಾನ್ಸರ್ ಚಿಕಿತ್ಸಾ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿ ಹೊಸದಾದೊಂದು ಚಿಕಿತ್ಸಾ ರೀತಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಕೆಲವು ಸಂಶೋಧಕರು ಮುಂದೆ ಬಂದಿದ್ದಾರೆ. ಅವರ ಪ್ರಕಾರ ಹನ್ನೊಂದು ದಿನದ ಚಿಕಿತ್ಸೆಯಲ್ಲಿ ಸ್ತನ ಕ್ಯಾನ್ಸರನ್ನು ಗುಣಪಡಿಸಬಹುದಾಗಿದೆ. ಎರಡು ಕ್ಯಾನ್ಸರ್ ಮದ್ದುಗಳನ್ನು ಸಂಯೋಜಿಸಿ ಪ್ರಯೋಗ ನಡೆಸಲಾಗಿದ್ದು ಅದು ಭಾರೀ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸ್ತನಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಭರವಸೆ ಸೃಷ್ಟಿಯಾಗಿದೆ.
ಆಮ್ಸಡರ್ಮ್‌ನಯುರೋಪಿಯನ್ ಬ್ರೆಸ್ಟ್ ಕ್ಯಾನ್ಸರ್ ಕಾನ್ಫೆರೇಶನ್‌ನಲ್ಲಿ ಹೊಸ ಸಂಶೋಧನೆಯ ಕುರಿತು ಇಂಗ್ಲೆಡ್‌ನ ವೈದ್ಯರು ಬಹಿರಂಗಪಡಿಸಿದ್ದಾರೆ. ಹೊಸ ಸಂಶೋಧನೆ ಮೂಲಕ ಸಾವಿರ ಗಟ್ಟಲೆ ರೋಗಿಗಳನ್ನು ಕೀಮೊಥೆರಪಿಯಿಂದ ಕಾಪಾಡಬಹುದೆಂದು ಅವರು ಹೇಳಿದ್ದಾರೆ. ಸ್ತನಕ್ಯಾನ್ಸರ್ ತೀವ್ರವಾಗಿದ್ದ ಇಂಗ್ಲೆಂಡ್‌ನ 23 ಆಸ್ಪತ್ರೆಯ ರೋಗಿಗಳಿಗೆ ಈ ಔಷಧ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಯೋಗಕ್ಕೊಳಗಾದ ಮಹಿಳೆಯರಲ್ಲಿ ಶೇ. 87ರಷ್ಟು ಮಂದಿ ರೋಗ ಮುಕ್ತರಾಗಿದ್ದಾರೆಂದು ಸಂಶೋಧಕರು ಹೇಳಿದ್ದಾರೆ. ಅವರಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕಡಿಮೆಯಾಗಿದೆ. ಕೆಲವು ಮಹಿಳೆಯರಲ್ಲಿ ಅದ್ಭುತ ಕರವಾದ ಪರಿಣಾಮವನ್ನು ಔಷಧ ಮಾಡಿದೆ. ಮದ್ದು ಸೇವಿಸಿದ ಮಹಿಳೆಯರಲ್ಲಿ ಶೆ.11ರಷ್ಟು ಮಂದಿ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಶೇ.17ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಂಶೋಧಕ ವೈದ್ಯರು ಹೇಳಿದ್ದಾರೆ.
ಈಗ ಉಪಯೋಗಿಸಲಾಗುತ್ತಿರುವ ಎರಡು ಕ್ಯಾನ್ಸರ್ ಔಷಧಗಳಾದ ಥೈವರ್ಬ್ ಮತ್ತು ಹೆರ್ ಸೆಪ್ಟೀನ್‌ನ್ನು ಮಿಶ್ರಣ ಮಾಡಿ ವೈದ್ಯರು ಪರೀಕ್ಷಿಸಿದ್ದರು. ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್, ಲಂಡನ್ನ ಇನ್ಸಿಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ ಇಲ್ಲಿನ ಸಂಶೋಧಕರು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಶಸ್ತ್ರಕ್ರಿಯೆಯ ಸ್ವಲ್ಪದಿವಸ ಮೊದಲು ಟ್ಯೂಮರ್‌ನ್ನು ಸಂಕುಚನಗೊಳಿಸುವುದು ಈ ಔಷಧ ಪ್ರಯೋಗದ ಮೂಲಕ ವೈದ್ಯರು ಬಯಸಿದ್ದರು. ಆದರೆ ಶಸ್ತ್ರಕ್ರಿಯೆಗೆ ಸಿದ್ಧತೆ ನಡೆಸಿದಾಗ ಕೆಲವು ಮಹಿಳೆಯರಲ್ಲಿ ಕ್ಯಾನ್ಸರ್ ಟ್ಯೂಮರ್ ಸಂಕುಚನ ಗೊಂಡಿದ್ದರೆ ಇನ್ನು ಕೆಲವು ಮಹಿಳೆಯರಲ್ಲಿ ನಿವಾರಣೆಯಾಗಿತ್ತು. ಕೆಲವು ದಿವಸಗಳ ಮೊದಲು ಮೂರು ಸೆಂಟಿಮೀಟರ್ ವಿಸ್ತಾರದಲ್ಲಿದ್ದ ಕ್ಯಾನ್ಸರ್ ಸಂಕುಚನವಾಗಿತ್ತು. ಹನ್ನೊಂದು ದಿವಸಗಳಲ್ಲಿ ಅನಿರೀಕ್ಷಿತವಾಗಿ ಈ ವರೆಗೂ ಊಹಿಸದ ಬದಲಾವಣೆ ರೋಗಿಗಳಲ್ಲಿ ನಡೆದಿತ್ತು ಎಂದು ಕ್ಯಾನ್ಸರ್ ಸರ್ಜನ್ ನಿಗೆಲ್ ಬುಂಡ್ರೆಡ್ ಹೇಳುತ್ತಾರೆ. ಇದು ಅದ್ಭುತ ಸಂಶೋಧನೆಯೆಂದು ಅವರು ಹೇಳುತ್ತಿದ್ದಾರೆ.
ಈಗ ಇದಕ್ಕೆ ಸಂಬಂಧಿಸಿದ ಪ್ರಯೋಗ ಕೇವಲ 257 ಮಹಿಳೆಯರಲ್ಲಿ ಕೇವಲ 66ಮಂದಿ ಮೇಲೆ ಮಾತ್ರ ಪ್ರಯೋಗ ನಡೆಸಲಾಗಿದೆ. ಈ ಮದ್ದು ಪರೀಕ್ಷೆ ನಡೆಸಲಾಗಿದ್ದು ವ್ಯಾಪಕ ಬಳಕೆಗೆ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಎಚ್.ಆರ್.2 ಪಾಸಿಟಿವ್ ಫಾಂ ಕ್ಯಾನ್ಸರಿರುವ ಮಹಿಳೆಯರಿಗೆ ಈ ಔಷಧವನ್ನು ನೀಡಲಾಗಿದೆ. ಈರೀತಿ ಸ್ತನಾರ್ಬುಧ ಬ್ರಿಟನ್‌ನಲಿ ಪ್ರತಿವರ್ಷ 8000 ಮಹಿಳೆಯರನ್ನು ಬಾಧಿಸುತ್ತಿದೆ. ಹೆರ್‌ಸೆಫ್ಟಿನ್ ಡ್ರಿಪ್ ಮೂಲಕ ಮಹಿಳೆಯರಿಗೆ ನೀಡಲಾಗುತ್ತದೆ. ಕೆಲವೊಮ್ಮೆ ಇದನ್ನು ಕಿಮೋಥೆರಪಿ ಜೊತೆಗೆ ನೀಡಲಾಗುತ್ತದೆ. ಥೈವರ್ಬ್‌ನ್ನು ಪಾಪಟನಿಬ್ ಎಂಬ ಹೆಸರಿನಲ್ಲಿಯೂ ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಬಾಧಿಸಿದವರಿಗೆ ಇದನ್ನು ಮಾತ್ರೆ ರೂಪದಲ್ಲಿ ನೀಡಲಾಗುತ್ತದೆ. ಇತರೆಲ್ಲ ಚಿಕಿತ್ಸೆ ವಿಫಲವಾದಾಗ ಇದನ್ನು ನೀಡಲಾಗುತ್ತದೆ. ಈ ಎರಡು ಮದ್ದುಗಳನ್ನು ಮಿಶ್ರಣ ಮಾಡಿ ನೀಡಿದರೆ ರೋಗವನ್ನು ಆರಂಭದಲ್ಲಿಯೇ ಇಲ್ಲವಾಗಿಸಬಹುದೆಂದು ಸಂಶೋಧಕರು ಹೇಳಿದ್ದಾರೆ. ಸ್ತನಕ್ಯಾನ್ಸರ್ ಪೀಡಿತರಿಗೆ ಸರ್ಜರಿ ನಡೆಸಿದರೂ ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣ ತೆಗೆದು ಹಾಕಲು ಸಾಧ್ಯವಿಲ್ಲ. ಈ ಔಷಧ ಹನ್ನೊಂದು ದಿವಸದ ಕೋರ್ಸ್‌ಗೆ1,50,000 ರೂ. ಬೆಲೆಯಿದೆ.







