ಸುಳ್ಯ: ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ತಾಲೂಕಿನ ವಿವಿಧೆಡೆ ಬೀದಿ ನಾಟಕ ಪ್ರದರ್ಶನ

ಸುಳ್ಯ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಉದ್ದೇಶದಿಂದ ರೂಪಿಸಲಾಗಿರುವ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಇಲಾಖೆಯ ವತಿಯಿಂದ ‘ಅಕ್ಷರ’ ಹೆಸರಿನ ಬೀದಿ ನಾಟಕ ತಾಲೂಕಿನ ವಿವಿಧೆಡೆ ಪ್ರದರ್ಶನಗೊಂಡಿದೆ. ಬೆಳ್ಳಾರೆ, ಏನೆಕಲ್ಲು, ದೇವಚಳ್ಳ, ಅರಂತೋಡು ಗಾಂಧಿನಗರ ಮತ್ತು ಸೋಣಂಗೇರಿಗಳಲ್ಲಿ ಈ ನಾಟಕದ ಪ್ರದರ್ಶನ ನಡೆಯಿತು. ಬೆಳ್ಳಾರೆಯ ಜೇಸಿಐ ಹಾಗೂ ಯುವ ಜೇಸಿ ವಿಭಾಗದವರು ಸಹಕಾರ ನೀಡಿದ್ದರು. ಶಿಕ್ಷಣ ಸಂಯೋಜಕ ಲಿಂಗಪ್ಪ ಬೆಳ್ಳಾರೆ ಅವರ ಪರಿಕಲ್ಪನೆ ಹಾಗೂ ರಂಗ ನಿರ್ದೇಶಕ ಸುಭಾಷ್ ಪಂಜ ಅವರ ನಿರ್ದೇಶನದಲ್ಲಿ ಬೆಳ್ಳಾರೆ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಮಹೇಶ್, ಸನತ್, ಮೋಕ್ಷಿತ್, ಹರ್ಷಿತಾ, ಶರತ್, ಸಚಿನ್, ಜಯತ್, ರಚನಾ, ರವಿ, ರೋಹಿತ್ ಮತ್ತು ನಿತೇಶ್ ನಟಿಸಿದ್ದರು. ಸುಳ್ಯದ ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಟಿ.ವೀಣಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಳಿನಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೋಟ್ಯಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಭವಾನಿ, ಗ್ರೀನ್‌ವ್ಯೆ ಶಾಲಾ ಮುಖ್ಯ ಶಿಕ್ಷಕ ಅಮರನಾಥ್, ಜಟ್ಟಿಪಳ್ಳ ಶಾಲಾ ಶಿಕ್ಷಕಿ ತೇಜಾ, ಕೇರ್ಪಳ ಶಾಲಾ ಶಿಕ್ಷಕಿ ದೇವಕಿ ಉಪಸ್ಥಿತರಿದ್ದರು. ಶಿಕ್ಷಕಿ ಭವಾನಿ ಸ್ವಾಗತಿಸಿ, ಲಿಂಗಪ್ಪ ಬೆಳ್ಳಾರೆ ವಂದಿಸಿದರು. ಶಿಕ್ಷಣ ಸಂಯೋಜಕಿ ರೇಖಾ ಶೇಟ್ ಕಾರ್ಯಕ್ರಮ ನಿರೂಪಿಸಿದರು.





