ಬಡತನದಿಂದ ನೊಂದು ಐದುವರ್ಷದ ಪುತ್ರಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

ದೇವರಿಂ, ಮಾರ್ಚ್.11: ಉತ್ತರ ಪ್ರದೇಶದ ದೇವರಿಯದ ಬರ್‌ಹಜ್‌ನಲ್ಲಿ ಮನೆಯಲ್ಲಿರುವ ಬಡತನದಿಂದ ಸಂಕಷ್ಟ ಅನುಭವಿಸುತ್ತಿದ್ದ ಮಹಿಳೆಯೊಬ್ಬರು ತನ್ನ ಪುತ್ರಿಗೆ ವಿಷಕೊಟ್ಟು ತಾನು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಕಪ್ರಾವಾರ್ ನೌಕಾಟೊಲಾದಲ್ಲಿ ಮಹಿಳೆ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಟುಂಬದವರು ಪೊಲೀಸರಿಗೆ ತಿಳಿಸದೆ ಶವಗಳನ್ನು ರಾತೋರಾತ್ರಿ ಅಂತಿಮ ಸಂಸ್ಕಾರ ನಡೆಸಿದ್ದಾರೆ. ಪೊಲೀಸರ ಅರಿವಿಗೂ ಈ ಘಟನೆ ಬಂದಿರಲಿಲ್ಲ. ಗ್ರಾಮನಿವಾಸಿಗಳು ಹೇಳುವ ಪ್ರಕಾರ ಆತ್ಮಹತ್ಯೆಗೆ ಬಡತನವೇ ಕಾರಣವಾಗಿದ್ದು ಕಳೆದ ಐದಾರು ದಿನಗಳಿಂದ ಮನೆಯಲ್ಲಿ ಈ ಕಾರಣದಿಂದ ಜಗಳವಾಗುತಿತ್ತು. ಮನೆಯ ಬಡತನದ ಪರಿಸ್ಥಿತಿಯಿಂದ ಮಹಿಳೆ ತುಂಬ ನೊಂದಿದ್ದರು. ಆದ್ದರಿಂದ ಆಕೆ ತನ್ನ ಐದು ವರ್ಷದ ಮಗುವಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಒಂದು ವರ್ಷದ ತನ್ನ ಮಗುವಿಗೂ ವಿಷ ನೀಡಲು ಪ್ರಯತ್ನಿಸಿದ್ದರು.ಆದರೆ ಮಗು ಹಟ ಹಿಡಿದು ಅಳತೊಡಗಿತ್ತು. ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದಾಗ ಅದು ಬದುಕಿ ಉಳಿದಿತ್ತು. ಆದರೆ ಹೆಣ್ಣುಮಗುವಿನ ಆರೋಗ್ಯ ಸ್ಥಿತಿ ಕೆಟ್ಟಿತ್ತು. ಅದು ಮೃತವಾಯಿತು. ರಾತ್ರಿ ಒಂದು ಗಂಟೆಗೆ ಮಹಿಳೆ ಕೂಡಾ ಮೃತರಾಗಿದ್ದರು. ಕುಟುಂಬ ರಾತ್ರೆಯಲ್ಲಿಯೇ ಶವಸಂಸ್ಕಾರ ನಡೆಸಿಬಿಟ್ಟಿದ್ದಾರೆ. ಪೊಲೀಸರಿಗೆ ಈವರೆಗೂ ಈ ವಿಚಾರ ತಿಳಿದಿಲ್ಲ. ಎಸೈ ಪರಮಾಶಂಕರ್ ಇಂತಹ ಘಟನೆಯ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.





