ಪುತ್ತೂರು: ಧನ್ಯಕುಮಾರ್ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ
ಪುತ್ತೂರು: ಬಜರಂಗದಳದ ಗೋ ರಕ್ಷಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು ಅವರನ್ನು ಪುತ್ತೂರು ಉಪವಿಭಾಗದಿಂದ ಗಡಿಪಾರು ಮಾಡಿ ಸಹಾಯಕ ಕಮಿಷನರ್ ಮತ್ತು ಉಪವಿಭಾಗ ದಂಡಾಧಿಕಾರಿಯವರು ನೀಡಿದ ಆದೇಶಕ್ಕೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಧನ್ಯಕುಮಾರ್ ಬೆಳಂದೂರು ಅವರನ್ನು ಆರು ತಿಂಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಧನ್ಯಕುಮಾರ್ ಅವರನ್ನು ಗಡಿಪಾರುಗೊಳಿಸುವಂತೆ ಪೊಲೀಸ್ ಇಲಾಖೆ ಉಪ ವಿಭಾಗ ದಂಡಾಧಿಕಾರಿಯವರಿಗೆ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದಲ್ಲಿ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಈ ಆದೇಶದ ವಿರುದ್ಧ ಧನ್ಯಕುಮಾರ್ ಬೆಳಂದೂರು ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಕೋರಿದ್ದರು. ರಿಟ್ ಅರ್ಜಿಯ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್. ಬೋಪಣ್ಣ ಅವರು ಉಪ ವಿಭಾಗ ದಂಡಾಧಿಕಾರಿಯವರ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಅರ್ಜಿದಾರರ ಪರ ನ್ಯಾಯವಾದಿ ಅರುಣಶ್ಯಾಂ ವಾದಿಸಿದ್ದರು.
Next Story





