ಉಳ್ಳಾಲ: ಅಪರಿಚಿತ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಉಳ್ಳಾಲ: ಅಪರಿಚಿತನೋರ್ವ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಪರಿಚಿತ ವ್ಯಕ್ತಿಯೋರ್ವ ಸೇತುವೆ ಬದಿಯಿಂದ ನಡೆದುಕೊಂಡು ಬಂದು ನಡುಭಾಗದಲ್ಲಿ ಏಕಾಏಕಿ ನದಿಗೆ ಧುಮುಕಿದ್ದಾನೆ. ಇದನ್ನು ಸೇತುವೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಹಾಗೂ ನದಿಯಲ್ಲಿ ಮರಳು ತೆಗೆಯುತ್ತಿದ್ದ ದೋಣಿಯಲ್ಲಿದ್ದವರು ಕಂಡಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಹಾರುವ ಸಂದರ್ಭ ಚಪ್ಪಲಿಗಳನ್ನು ಮೇಲಿರಿಸಿ ವ್ಯಕ್ತಿ ಹಾರಿದ್ದು, ಎರಡು ಚಪ್ಪಲಿಗಳನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
Next Story





