ಭಟ್ಕಳ: ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಸನ್ ಮುಲ್ಲಾ ನಿಧನ

ಭಟ್ಕಳ: ಭಟ್ಕಳದ ಖ್ಯಾತ ಲೇಖಕ ಚಿಂತಕ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಹಸನ್ ಮುಲ್ಲಾ (92) ಗುರುವಾರ ರಾತ್ರಿ ನಿಧನರಾದರು.
ಅವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದಿದ್ದರು. ಮೃತರು ಭಟ್ಕಳದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು 5ಗಂಡು ಹಾಗೂ ಮೂವರು ಪುತ್ರಿಯನ್ನು ಅಗಲಿದ್ದಾರೆ. ಭಟ್ಕಳ ಪುರಸಭೆಯ ನಾಮದೇರ್ಶಿತ ಸದಸ್ಯ ಹಾಗೂ ಪತ್ರಕರ್ತ ಫಯ್ಯಾರ್ ಮುಲ್ಲಾ ಇವರ ಐವರು ಪುತ್ರರಲ್ಲಿ ಒಬ್ಬರಾಗಿದ್ದಾರೆ.
ಶುಕ್ರವಾರ ಜುಮಾಅ ನಮಾರ್ ಬಳಿಕ ಜಾಮಿಯಾ ಮಸೀದಿ (ಚಿನ್ನದ ಪಳ್ಳಿಯಲ್ಲಿ ಮೃತರ ಜನಾರ್ ನಿರ್ವಹಿಸಿ ಶವಸಂಸ್ಕಾರ ಮಾಡಲಾಯಿತು
Next Story





