ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್-ಕ್ವಿಜ್ 2016 ಸ್ಪರ್ಧೆ:ಎಸ್ ಡಿಎಂ ಪ್ರಥಮ, ಅಲೋಶಿಯಸ್ ದ್ವಿತೀಯ

ಮಂಗಳೂರು, ಮಾ. 11: ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ನಡೆದ ವಿಜ್-ಕ್ವಿಜ್ 2016 ಸ್ಪರ್ಧೆಯಲ್ಲಿ ಎಸ್ ಡಿ ಎಂ ಕಾಲೇಜ್ ಆಫ್ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳಾದ ಇರ್ವಿನ್ ಗ್ಲೇನ್ ಸೋನ್ಸ್, ಶೇಕ್ ರಿಜ್ವಾನ್ ಅಹ್ಮದ್ ವಿಜೇತರಾಗಿದ್ದಾರೆ. ದ್ವಿತೀಯ ಸ್ಥಾನವನ್ನು ಸಂತ ಅಲೋಶಿಯಸ್ ಕಾಲೇಜಿನ ಲಯೋನಲ್ ರೋಲ್ಸನ್, ನಾರ್ಥನ್ ಪೂವನ್ನ, ಶೌನ್ ಕೊಯೆಲ್ಹೊ, ತೃತೀಯ ಸ್ಥಾನವನ್ನು ಎಸ್ ವಿ ಎಸ್ ಕಾಲೇಜು ಬಂಟ್ವಾಳದ ಅಭಿಜಾಥ, ಸೂರಜ್, ಗುರುಪ್ರಸಾದ್ ಪಡೆದುಕೊಂಡರು.
ಇಂದು ನಡೆದ ವಿಜ್-ಕ್ವಿಜ್ 2016ರ ಗ್ರಾಂಡ್ ಫಿನಾಲೆಯಲ್ಲಿ
ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 25,000 ರೂ., ದ್ವಿತೀಯ 15,000 ರೂ. ಹಾಗೂ ತೃತೀಯ 10,000 ರೂ. ನಗದು ಬಹುಮಾನ ನೀಡಲಾಯಿತು.
ವ್ಯವಹಾರ ಇತಿಹಾಸ, ಮಾರುಕಟ್ಟೆ, ಮಾನವ ಸಂಪದ ಹಾಗೂ ಭಾರತದ ಅರ್ಥ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಇತ್ತೀಚಿನ ವಿದ್ಯಮಾನಗಳು ಹಾಗೂ ಇತರ ಉದಯೋನ್ಮುಖ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸಪ್ರಶ್ನೆ ಕಾಲೇಜು ಹಂತ ಹಾಗೂ ಸಹ್ಯಾದ್ರಿ ಕ್ಯಾಂಪಸ್ ಎಂಬ ಎರಡು ಹಂತ ಗಳಲ್ಲಿ ನಡೆಯಲಿದ್ದು, ಕಾಲೇಜು ಹಂತದ ರಸಪ್ರಶ್ನೆ ಸ್ಪರ್ಧೆ ಕಳೆದ ೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿತ್ತು. ದ.ಕ. ಹಾಗೂ ಉಡುಪಿ ಜಿಲ್ಲೆಗಳ 26 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲನೆಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 5,000 ವಿದ್ಯಾರ್ಥಿಗಳಲ್ಲಿ 650 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.650 ಮಂದಿ ಸ್ಪರ್ಧಿಗಳಿಗೆ ಇಂದು ಆಯೋಜಿಸಿದ ಎರಡು ಹಂತದ ಸ್ಪರ್ಧೆಯಲ್ಲಿ ಗ್ರಾಂಡ್ ಫಿನಾಲೆಗೆ ಆಯ್ಕೆ ಮಾಡಲಾಯಿತು. ಮಧ್ಯಾಹ್ನ ನಡೆದ ಗ್ರಾಂಡ್ ಫಿನಾಲೆ ಸ್ಪರ್ಧೆಯಲ್ಲಿ ಮೂರು ತಂಡಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು.
ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಎಸ್‌ಎಲ್‌ಕೆ ಸ್‌ಟಾ ವೇರ್‌ನ ಎಚ್‌ಆರ್‌ಎಂ ವಿಭಾಗದ ಜನರಲ್ ಮ್ಯಾನೇಜರ್ ಮೂರ್ತಿ ರಾಮಯ್ಯ ಕೃಷ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೆ ವ್ಯಕ್ತಿಗೆ ಯಶಸ್ಸು ಸುಲಭವಾಗಿ ಬರುವುದಿಲ್ಲ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿದ್ದರೆ ಯಶಸ್ಸು ಸಾಧ್ಯವಿದೆ.ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡುವ ವ್ಯಕ್ತಿ ಪರಿಪೂರ್ಣನಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ .ಎಂ. ಭೂಶಿ ವಹಿಸಿದ್ದರು. ವ್ಯವಹಾರ ಆಡಳಿತ ವಿಭಾಗದ ನಿರ್ದೇಶಕ ಡಾ ವಿಶಾಲ ಸಮರ್ಥ ಸ್ವಾಗತಿಸಿದರು, ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರೊಫೆಸರ್ ಲೋಕೇಶ್ ವಿಝ್ ಕ್ವಿಜ್ ಮಾಹಿತಿ ನೀಡಿದರು. ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರೊಫೆಸರ್ ರಮೇಶ್ ಕೆ.ಜಿ. ವಂದಿಸಿದರು.













