ಮಂಗಳೂರು: ಬಾಲಕಿಯ ಮಾನಭಂಗ ಯತ್ನ ಪ್ರಕರಣ, ಆರೋಪಿಗೆ ಮೂರು ವರ್ಷ ಶಿಕ್ಷೆ
ಮಂಗಳೂರು, ಮಾ.10: ಅಪ್ರಾಪ್ತ ವಯಸ್ಸಿನ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಮೂರು ವರ್ಷ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.2014 ಜೂ.15ರಂದು ಬೈಕಂಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಡಿಗೆ ಮನೆಯ ಮಾಲಕ ಹನುಮಂತಪ್ಪ (75) ಎಂಬಾತ 7 ವರ್ಷದ ಬಾಲಕಿಯನ್ನು ಪುಸಲಾಯಿಸಿ ಮಾನಭಂಗಕ್ಕೆ ಯತ್ನಿಸಿದ್ದ. ಈ ಬಗ್ಗೆ ಬಾಲಕಿ ನೀಡಿದ ಹೇಳಿಕೆಯಂತೆ ಆಕೆಯ ತಾಯಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಸಂತ್ರಸ್ತ ಬಾಲಕಿಗೆ 25 ಸಾವಿರ ರೂ. ಮೊತ್ತವನ್ನು ಪಾವತಿಸಬೇಕು. ಅಲ್ಲದೆ ಜಿಲ್ಲಾ ಕಾನೂನು ಕೋಶ ಕೂಡ ಬಾಲಕಿಗೆ ಪ್ರತ್ಯೇಕ ಪರಿಹಾರ ಮೊತ್ತ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
Next Story





