ಕಾಸರಗೋಡು : ಹಲ್ಲೆಗೊಳಗಾಗಿದ್ದ ಮಂಜೇಶ್ವರ ಠಾಣಾ ಪೊಲೀಸ್ ಕಾನ್ಸ್ ಟೇಬಲ್ ಮ್ರತ
 (1).jpg)
ಕಾಸರಗೋಡು : ತಂಡದಿಂದ ಹಲ್ಲೆಗೊಳಗಾಗಿದ್ದ ಮಂಜೇಶ್ವರ ಟಾಣಾ ಪೊಲೀಸ್ ಕಾನ್ಸ್ ಟೇಬಲ್ ಮ್ರತಪಟ್ಟಿ ದ್ದಾರೆ.
ಮ್ರತಪತ್ತವರನ್ನು ಸುನಿಲ್ ಕುಮಾರ್ ( ೪೨) ಎಂದು ಗುರುತಿಸಲಾಗಿದೆ. ಮೆಡಿಕಲ್ ರಜೆಯಲ್ಲಿದ್ದ ಅವರು ಇಂದು ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದು , ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ .
೨೦೧೫ ರ ನವಂಬರ್ ೧೬ ರಂದು ಮುಂಜಾನೆ ಮಂಜೇಶ್ವರ ತೂಮಿನಾಡಿನಲ್ಲಿ ಘಟನೆ ನಡೆದಿತ್ತು . ಮಂಜೇಶ್ವರ ಪರಿಸರದಲ್ಲಿ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬೈಕ್ ನಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಐವರ ತಂಡವು ಸುನಿಲ್ ಕುಮಾರ್ ಮತ್ತು ಜೊತೆ ಗಿದ್ದ ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ದೀಪಕ್ ರವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.
ರಸ್ತೆ ಬದಿ ಅನುಮಾನಾಸ್ಪದವಾಗಿ ಕಂಡು ಬಂದ ಇವರನ್ನು ಪ್ರಶ್ನಿಸಿದಾಗ ತಂಡವು ಹಲ್ಲೆ ನಡೆಸಿತ್ತು . ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಇತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ತಲುಪಿಸಿದ್ದರು
ತಲೆಗೆ ಗಂಭೀರ ಸ್ವರೂಪದ ಗಾಯಗೊಂಡ ಸುನಿಲ್ ಕುಮಾರ್ ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಬಳಿಕ ಮೆಡಿಕಲ್ ರಜೆಯಲ್ಲಿ ತಿರುವನಂತಪುರದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಶುಕ್ರವಾರ ಸಂಜೆ ಕುಸಿದು ಬಿದ್ದ ಇವರನ್ನು ತಿರುವನಂತಪುರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮ್ರತಪಟ್ಟರು.
ಅಂದು ನಡೆದ ಘಟನೆಗೆ ಸಂಬಂಧಪಟ್ಟಂತೆ ತೂಮಿನಾಡಿನ ಸಿದ್ದಿಕ್ , ಸಾಬೀರ್ , ಅನ್ವರ್ , ಮುಬಾರಕ್ ಮೊದಲಾದವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದರು.
ನಿಧನದ ಸುದ್ದಿ ತಿಳಿದು ಮಂಜೇಶ್ವರ ಪೊಲೀಸರು ತಿರುವನಂತಪುರಕ್ಕೆ ಹೊರಟಿದ್ದಾರೆ.





