ವಿಶ್ವ ಸಾಂಸ್ಕೃತಿಕ ಉತ್ಸವವು ಕಲೆ ಮತ್ತು ಸಂಸ್ಕೃತಿಯ 'ಕುಂಭ ಮೇಳ' : ಪ್ರಧಾನಿ ಮೋದಿ ಬಣ್ಣನೆ

ಹೊಸದಿಲ್ಲಿ, ಮಾ.11: ವಿಶ್ವ ಸಾಂಸ್ಕೃತಿಕ ಉತ್ಸವವು ಕಲೆ ಮತ್ತು ಸಂಸ್ಕೃತಿಯ ಕುಂಭ ಮೇಳವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಯಮುನಾ ನದಿ ದಂಡೆಯಲ್ಲಿ ಇಂದು ಸಂಜೆ ಆರಂಭಗೊಂಡ ಮೂರು ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು.
ಸೌಮ್ಯ ಸಾಮರ್ಥ್ಯ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೆ ಸಹಕಾರಿಯಾಗಿದೆ ಎಂದು ಮೋದಿ ನುಡಿದರು.
ನಮ್ಮ ಕನಸುಗಳನ್ನು ನನಸಾಗಿಸಲು, ಸವಾಲುಗಳನ್ನು ಎದುರಿಸಲು ಮತ್ತು ಇತರರಿಗಾಗಿ ಬದುಕಲು ಆರ್ಟ್ ಆಫ್ ಲಿವಿಂಗ್ ಮೂಲಕ ಸಾಧ್ಯ ಎಂದು ಮೋದಿ ಹೇಳಿದರು.
ಮೋದಿ ಭಾಷಣದ ಮುಖ್ಯಾಂಶಗಳು
*ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಇರಬೇಕು. ನಾವು ಪರಸ್ಪರ ಕಚ್ಚಾಡುತ್ತಿದ್ದರೆ ಜಗತ್ತು ಯಾಕೆ ನಮ್ಮ ಕಡೆ ನೋಡಬೇಕು ?
*ಆರ್ಟ್ ಆಫ್ ಲಿವಿಂಗ್ ವಿಶ್ವಕ್ಕೆ ಭಾರತ ಬಗ್ಗೆ ತಿಳಿಯಲು ಸಹಕಾರಿಯಾಗಿದೆ.
*ನಾನು ಶ್ರೀ ರವಿ ಶಂಕರ್ ಅವರನ್ನು ಅಭಿನಂದಿಸುತ್ತೇನೆ . ಅವರ ಉದ್ದಿಷ್ಟಕಾರ್ಯ ಪ್ರಪಂಚದ ನಾನಾ ದೇಶಗಳಿಗೆ ಹರಡಿದೆ.
*ಭಾರತ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದೆ. ವೈವಿಧ್ಯಮಯವಾಗಿರುವ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ.ಈ ಕಾರಣದಿಂದಾಗಿ ಭಾರತ ಜಗತ್ತಿನ ಗಮನ ಸೆಳೆದಿದೆ.





